ಮಾವು, ಅನಾನಸ್, ದ್ರಾಕ್ಷಿ ಹೀಗೆ ಭಾರತ ತರಹೇವಾರಿ ಹಣ್ಣುಗಳ ಕಣಜ. ಬೇಸಿಗೆಯಲ್ಲಿ ರುಚಿಕರವಾದ ನೇರಳೆ ಹಣ್ಣು ಸಿಗುತ್ತದೆ. ಇದನ್ನು ಜಾಮೂನ್ ಅಂತಲೂ ಕರೆಯುತ್ತಾರೆ. ಹುಳಿ-ಸಿಹಿಯ ಮಿಶ್ರಣವಾಗಿರೋ ನೇರಣೆ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.
ಹೊಟ್ಟೆನೋವು, ಮಧುಮೇಹ ಮತ್ತು ಸಂಧಿವಾತಕ್ಕೆ ಇದು ಅತ್ಯುತ್ತಮ ಮನೆಮದ್ದು. ಆದರೆ ನೇರಳೆ ಹಣ್ಣಿನ ಸೇವನೆಯಿಂದ ಕೆಲವೊಂದು ಅಡ್ಡ ಪರಿಣಾಮಗಳೂ ಇವೆ. ನೇರಳೆ ಹಣ್ಣನ್ನು ಅತಿಯಾಗಿ ತಿನ್ನುವುದು ಅಪಾಯಕಾರಿ. ಆಯುರ್ವೇದದ ಪ್ರಕಾರ ಎಲ್ಲವನ್ನೂ ಸೀಮಿತ ಪ್ರಮಾಣದಲ್ಲಿ ಮತ್ತು ಔಷಧಿ ರೂಪದಲ್ಲಿ ಮಾತ್ರ ಸೇವಿಸಬೇಕು.
ಇದು ನೇರಳೆ ಹಣ್ಣಿಗೆ ಅನ್ವಯಿಸುತ್ತದೆ. ಅಧಿಕ ರಕ್ತದೊತ್ತಡವಿರುವ ರೋಗಿಗಳು ನೇರಳೆ ಹಣ್ಣನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗಬಹುದು. ನೇರಳೆ ಹಣ್ಣು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ.
ಆದರೆ ನೇರಳೆ ಹಣ್ಣಿನ ಅತಿಯಾದ ಸೇವನೆ ಮಲಬದ್ಧತೆಗೆ ಕಾರಣವಾಗಬಹುದು. ನಿಮಗೆ ಮೊಡವೆ ಸಮಸ್ಯೆ ಇದ್ದರೆ ನೇರಳೆ ಹಣ್ಣನ್ನು ಹೆಚ್ಚಾಗಿ ಸೇವಿಸಬಾರದು. ಮೊಡವೆ ಸೇರಿದಂತೆ ಇತರ ಚರ್ಮದ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ನೇರಳೆ ಹಣ್ಣನ್ನು ಅತಿಯಾಗಿ ತಿಂದರೆ ವಾಂತಿಯಾಗುವ ಸಾಧ್ಯತೆಯೂ ಇರುತ್ತದೆ.