ಹಿಪ್ಪು ನೇರಳೆ ಹಣ್ಣು ಎಂದಾಕ್ಷಣ ಬಾಲ್ಯದಲ್ಲಿ ಇಷ್ಟಪಟ್ಟು ತಿನ್ನುತ್ತಿದ್ದ ದಿನಗಳು ನೆನಪಾಗುತ್ತಿವೆಯೇ..? ಇದರ ಉಪಯೋಗಗಳ ಬಗ್ಗೆ ನಿಮಗೆ ಗೊತ್ತೇ…?
ಹಿಪ್ಪು ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ನಾರು ಮುಂತಾದ ಅಂಶಗಳಿವೆ. ಹಿಪ್ಪು ನೇರಳೆ ಹಣ್ಣಿನಲ್ಲಿ ದಿನನಿತ್ಯ ಅಗತ್ಯವಾದ 10ರಷ್ಟು ನಾರಿನ ಅಂಶವಿದೆ.
ಇದರ ಸೇವನೆಯಿಂದ ಮೂತ್ರ ವಿಸರ್ಜನೆ ತೊಂದರೆಗಳು, ಹೊಟ್ಟೆ ಉಬ್ಬರ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಹಿಪ್ಪು ನೇರಳೆ ಹಣ್ಣಿನಲ್ಲಿ ಕಬ್ಬಿಣ ಅಂಶ ಹೇರಳವಾಗಿದ್ದು, ಇದು ಜೀವಕೋಶಗಳಿಗೆ ಅಗತ್ಯವಾದ ಆಮ್ಲಜನಕವನ್ನು ಪೂರೈಸುವಲ್ಲಿ ಸಹಕಾರಿಯಾಗಿದೆ.
ಹಿಪ್ಪು ನೇರಳೆ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾದ ಫ್ಲಾವೋನೈಡ್ ಅಂಶವಿದ್ದು, ಇವು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತವೆ. ಅಷ್ಟೇ ಅಲ್ಲದೆ ರಕ್ತ ನಾಳದಲ್ಲಿ ಸಂಗ್ರಹಣೆಯಾಗಿರುವ ಅನಗತ್ಯ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಇವು ಜೀವಕೋಶಗಳಿಗೆ ಅಪಾಯವನ್ನು ಉಂಟು ಮಾಡುವ ಕ್ಯಾನ್ಸರ್ ಕಾರಕ ಅಂಶಗಳ ವಿರುದ್ಧ ಹೋರಾಡುತ್ತವೆ.