ಅಮೆರಿಕಾದ ಹವಾಮಾನ ಶಾಸ್ತ್ರಜ್ಞರೊಬ್ಬರು ಸುಂಟರಗಾಳಿಯ ಬಗ್ಗೆ ಎಚ್ಚರಿಸಲು ನೇರ ಪ್ರಸಾರದ ಮಧ್ಯೆ ಕುಟುಂಬಕ್ಕೆ ಕರೆ ಮಾಡಿರೋ ವಿಡಿಯೋ ವೈರಲ್ ಆಗಿದೆ.
ಎನ್‌ಬಿಸಿ ವಾಷಿಂಗ್‌ಟನ್‌ನ ಮುಖ್ಯ ಹವಾಮಾನ ಶಾಸ್ತ್ರಜ್ಞ ಡೌಗ್ ಕಮ್ಮರೆರ್ ನೇರ ಪ್ರಸಾರದ ಮಧ್ಯೆ ತನ್ನ ಕುಟುಂಬಕ್ಕೆ ಕರೆ ಮಾಡಿದ್ದಾರೆ. ಅಪ್ಪಳಿಸಬಹುದಾದ ಸುಂಟರಗಾಳಿಯ ಬಗ್ಗೆ ತನ್ನ ಕುಟುಂಬವನ್ನು ಎಚ್ಚರಿಸಿದ್ದಾರೆ.
ಕಮ್ಮರೆರ್ ಅವರು ಮಾರ್ಚ್ 31ರಂದು ಹವಾಮಾನ ವರದಿಯ ನೇರ ಪ್ರಸಾರವನ್ನು ಮಾಡುತ್ತಿದ್ದರು. ಈ ವೇಳೆ ಅವರು ರಾಷ್ಟ್ರೀಯ ಹವಾಮಾನ ಸೇವೆಯಿಂದ ಸುಂಟರಗಾಳಿಯ ಎಚ್ಚರಿಕೆಯ ಬಗ್ಗೆ ತಿಳಿದುಕೊಂಡಿದ್ದಾರೆ. ಸುಂಟರಗಾಳಿಯು ಅಪ್ಪಳಿಸಬಹುದಾದ ಪ್ರದೇಶದಲ್ಲಿ ಅವರ ಮನೆಯಿತ್ತು. ಹಾಗಾಗಿ ನೇರ ಪ್ರಸಾರದಲ್ಲೇ ತನ್ನ ಪುತ್ರನಿಗೆ ಕರೆ ಮಾಡಿ, ಎಚ್ಚರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಚಂಡಮಾರುತದ ಹಾದಿಯನ್ನು ತೋರಿಸುವ ಹವಾಮಾನ ನಕ್ಷೆಯ ಮುಂದೆ ನಿಂತುಕೊಂಡಿರುವ ಕಮ್ಮರೆರ್ ಫೋನ್‌ನಲ್ಲಿ ಮಾತನಾಡಿದ್ದಾರೆ. ಆದಷ್ಟು ಬೇಗ ಕೆಳಗಿಳಿಯಿರಿ ಎಂದು ಅವರು ಫೋನ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ತನ್ನ ಮಕ್ಕಳನ್ನು ಎಚ್ಚರಿಸಬೇಕಾಗಿರುವುದು ಕರ್ತವ್ಯವಾಗಿದೆ. ಅವರು ಬಹುಶಃ ಆನ್‌ಲೈನ್ ಗೇಮಿಂಗ್ ಆಡುತ್ತಿದ್ದಾರೆ. ಹೀಗಾಗಿ ಅವರು ಇದನ್ನು ನೋಡದೇ ಇರಬಹುದು. ಹೀಗಾಗಿ ಕರೆ ಮಾಡಿ ವಿಚಾರ ತಿಳಿಸಿದ್ದಾಗಿ ಹೇಳಿದ್ದಾರೆ. ಬಳಿಕ ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡ ಕಮ್ಮರೆರ್, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕ್ರಮವನ್ನು ಶ್ಲಾಘಿಸಿದ ಬಳಕೆದಾರರು, ನಿಮ್ಮ ಮಕ್ಕಳಿಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
https://twitter.com/LinaMizerek/status/1509713005969350662?ref_src=twsrc%5Etfw%7Ctwcamp%5Etweetembed%7Ctwterm%5E1509713535168917506%7Ctwgr%5E%7Ctwcon%5Es3_&ref_url=https%3A%2F%2Fwww.firstpost.com%2Fworld%2Fwatch-nbc-meteorologist-calls-family-amid-live-broadcast-to-warn-them-of-tornado-10516421.html