ಅಡುಗೆಗಾಗಿ ಸನ್ ಪ್ಲವರ್, ತೆಂಗಿನೆಣ್ಣೆ ಬಳಸುತ್ತಿದ್ದೀರೇ? ಹಾಗಿದ್ದರೆ ಒಮ್ಮೆ ನೆಲಕಡಲೆ ಬೀಜದ ಎಣ್ಣೆ ಬಳಸಿ ನೋಡಿ, ಅದೆಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.
ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯಲ್ಲಿ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಒಮೆಗಾ 3 ಮತ್ತು 6 ಫ್ಯಾಟಿ ಆಸಿಡ್ ಫೈಬರ್ ಜಾಸ್ತಿ ಇದ್ದು ಪ್ರೋಟಿನ್ ಕ್ಯಾಲ್ಸಿಯಂ ಪೊಟ್ಯಾಷಿಯಂ ಸೋಡಿಯಂ ಇದೆ. ಶೇಂಗಾ ಎಣ್ಣೆ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ ಜೊತೆಗೆ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ವಿಟಮಿನ್ ಹೇರಳವಾಗಿದ್ದು, ಡಿ ಆಕ್ಸಿಡೆಂಟ್ ಕೂಡಾ ಸಾಕಷ್ಟಿರುವುದರಿಂದ ಹೃದಯಾಘಾತವಾಗದಿರುವಂತೆ ಕಾಪಾಡುತ್ತದೆ.
ಮೆದುಳು ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಮಾತ್ರವಲ್ಲ ನೆನಪಿನ ಶಕ್ತಿಯನ್ನು ಜಾಸ್ತಿ ಮಾಡುತ್ತದೆ.
ಕ್ಯಾನ್ಸರ್ ಅನ್ನು ನಿಯಂತ್ರಿಸುವ ಶಕ್ತಿಯೂ ಇದಕ್ಕಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇದು ತ್ವಚೆಯ ಯೌವನವನ್ನು ಮರಳಿಸುತ್ತದೆ. ಮಾಡುತ್ತದೆ ಇನ್ನು ವೃದ್ದಾಪ್ಯ ಕೂಡ ಕಡಿಮೆ ಮಾಡುತ್ತದೆ ಇದರ ಮಸಾಜ್ ಮಾಡುವುದರಿಂದ ಡ್ರೈ ಚರ್ಮದ ಸಮಸ್ಯೆ ದೂರ ಆಗುತ್ತದೆ. ರಕ್ತದೊತ್ತಡ, ಹೈಬಿಪಿ ಸಮಸ್ಯೆಯನ್ನೂ ನಿವಾರಿಸುತ್ತದೆ.