ಭಾರತದಲ್ಲಿ ಹಲವು ಸಂಸ್ಕೃತಿ, ಸಂಪ್ರದಾಯಗಳಿವೆ. ದೇಶದಲ್ಲಿ ಹೆಚ್ಚಿನವರು ಊಟ ಮಾಡುವಾಗ ಸಾಮಾನ್ಯವಾಗಿ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಹಲವು ಪ್ರಯೋಜನಗಳಿವೆ.
ನೆಲದ ಮೇಲೆ ಕುಳಿತುಕೊಂಡು ಊಟ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಕುಳಿತುಕೊಳ್ಳುವುದು ಯೋಗಾಸನದ ಒಂದು ಭಂಗಿಯಂತಿರುತ್ತದೆ. ಇದರಿಂದ ದೇಹಕ್ಕೆ ಅನುಕೂಲವಾಗುತ್ತದೆ. ಬಗ್ಗಿ ಏಳುವುದರಿಂದ ಜೀರ್ಣಕ್ರಿಯೆ ಮತ್ತು ಉಸಿರಾಟಕ್ಕೆ ಸಹಕಾರಿಯಾಗುತ್ತದೆ. ಇದರೊಂದಿಗೆ ಹೆಚ್ಚಾದ ತೂಕ ಇಳಿಸಿಕೊಳ್ಳಲು ನೆಲದ ಮೇಲೆ ಕುಳಿತುಕೊಂಡು ಊಟ ಮಾಡಿದರೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ಇದರೊಂದಿಗೆ ಕುಟುಂಬ ಸದಸ್ಯರೊಂದಿಗೆ ಬಾಂಧವ್ಯ ವೃದ್ಧಿಸುತ್ತದೆ. ಎಲ್ಲರೂ, ಒಟ್ಟಿಗೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ಆತ್ಮೀಯತೆ ಬೆಳೆಯುತ್ತದೆ. ಮಾತ್ರವಲ್ಲ, ರಕ್ತ ಸಂಚಾರವೂ ಸುಗಮವಾಗುತ್ತದೆ ಎನ್ನಲಾಗಿದೆ.