8 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದ ವ್ಯಕ್ತಿಯು ಉತ್ತರ ಪ್ರದೇಶದ ಕಾನ್ಪುರದಲ್ಲಿ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾನೆ. ಕಲ್ಯಾಣಪುರ ಪ್ರದೇಶದ ಬಾರಾ ಸಿರೋಹಾ ಕಾಲುವೆ ಬಳಿ ಪೊಲೀಸರು ಈತನ ಮೇಲೆ ಫೈರಿಂಗ್ ನಡೆಸಿದ್ದಾರೆ.
ಮಂಗಳವಾರದಂದು ಅಪ್ರಾಪ್ತ ಸಂತ್ರಸ್ತೆಯ ಪೋಷಕರು ತಮ್ಮ ಮಗಳನ್ನು ಕಿಡ್ನಾಪ್ ಮಾಡಿ ಅತ್ಯಾಚಾರಗೈದಿದ್ದಾನೆ ಎಂದು ಆರೋಪಿಸಿ ನೆರೆಮನೆಯಾತನ ವಿರುದ್ಧ ದೂರು ನೀಡಿದ್ದರು. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಹಾಲು ತರಲೆಂದು ಮಗಳು ಮನೆಯಿಂದ ಹೊರ ಹೋಗಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಎನ್ಕೌಂಟರ್ ವಿಚಾರವಾಗಿ ಮಾತನಾಡಿದ ಕಲ್ಯಾಣಪುರ ಎಸಿಪಿ ದಿನೇಶ್ ಶುಕ್ಲಾ, ಬಾರಾ ಸಿರೋಹಾ ಕಾಲುವೆ ಬಳಿ ಅಪರಿಚಿತ ವ್ಯಕ್ತಿಯು ನಮ್ಮ ಮೇಲೆ ಗುಂಡು ಹಾರಿಸಿ ಅರಣ್ಯ ಪ್ರದೇಶದ ಕಡೆಗೆ ಓಡಿಹೋದನು. ಆತ್ಮರಕ್ಷಣೆಗಾಗಿ, ನಂತರ ಪೊಲೀಸರು ಗುಂಡು ಹಾರಿಸಿದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದರು. ಸಬ್ ಇನ್ಸ್ಪೆಕ್ಟರ್ ಕೂಡ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.