ರಾಜ್ಯದಲ್ಲಿ ಕೊರೋನಾ ಸಣ್ಣ ಪ್ರಮಾಣದ ಇಳಿಕೆ ಕಾಣುತ್ತಿದೆ. ಕೊರೋನಾತಂಕ ಅಥವಾ ಒಮಿಕ್ರಾನ್ ಭೀತಿ ಕಮ್ಮಿಯಾಗಿಲ್ಲವಾದ್ರು, ಇಷ್ಟೆಲ್ಲಾ ಭೀಕರ ಸುದ್ದಿಗಳ ನಡುವೆ ಮನಸ್ಸಿಗೆ ಪುಟ್ಟ ದೈರ್ಯ ನೀಡುವಂತ ಸುದ್ದಿ ಹೊರಬಿದ್ದಿದೆ. ಸೋಂಕಿತರ ಸಂಖ್ಯೆಯ ಚಾರ್ಟ್ ಏರಿಕೆಯಾಗ್ತಿದ್ರು, ಎರಡನೇ ಅಲೆಗೆ ಹೋಲಿಸಿದ್ರೆ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳಲ್ಲಿ ಬಹಿರಂಗವಾಗಿದೆ. ಹೀಗಾಗಿ ಮುಂದೆ ರಾಜ್ಯದಲ್ಲಿ ಸೋಂಕು ಹೆಚ್ಚಳವಾದ್ರು, ಆತಂಕಬೇಡ ಎಂದು ತಜ್ಞರು ಭರವಸೆ ನೀಡಿದ್ದಾರೆ.
ಮೂರನೇ ಅಲೆ ಎರಡನೇ ಅಲೆಯಂತೆ ಭಯಂಕರವಾಗಿಲ್ಲ. ಈ ಬಾರಿಯ ಸೋಂಕು ನೆಗಡಿ, ಕೆಮ್ಮು, ಜ್ವರಕ್ಕೆ ಮಾತ್ರ ಸೀಮಿತವಾಗಿದೆ. ಒಮಿಕ್ರಾನ್ ಸೋಂಕನ್ನು ಮೊದಲು ತೀವ್ರತರವಾದ ರೂಪಾಂತರಿ ಎಂದರೂ ಸಧ್ಯಕ್ಕಿರುವ ಅಧ್ಯಯನಗಳು, ಇದನ್ನ ಸೌಮ್ಯ ಸ್ವಭಾವದ ವೈರಸ್ ಎಂದು ಪರಿಗಣಿಸಿವೆ. ಸಧ್ಯದ ಸ್ಥಿತಿ ನೋಡುತ್ತಿದ್ದರು ಹಾಗೆಯೇ ಅನ್ನಿಸುತ್ತಿದೆ.
ಏಕೆಂದರೆ ರಾಜ್ಯದ ಪ್ರತಿದಿನದ ಕೊರೋನಾ ಸೋಂಕಿತರ ಸಂಖ್ಯೆ 40ಸಾವಿರಕ್ಕೂ ಹೆಚ್ಚಿದೆ. ಆದರೆ ಇದರಲ್ಲಿ ಆಸ್ಪತ್ರೆ ಸೇರುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಉದಾಹರಣೆಗೆ ಜನವರಿ 22 ರಂದು 42,470 ಸೋಂಕು ವರದಿಯಾಗಿತ್ತು, ಅದರಲ್ಲಿ ಕೇವಲ 292 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ, ಪ್ರತಿದಿನ 50,000 ಕೇಸ್ ಬಂದ್ರು ಆಸ್ಪತ್ರೆಗೆ ದಾಖಲಾಗುವವರು ಅತಿ ಕಡಿಮೆಯಾಗಿರುವುದರಿಂದ ಮೂರನೇ ಅಲೆಯ ಭಯ ಬೇಡ ಆದರೆ ಎಚ್ಚರಿಕೆ ಇರಲಿ ಎಂಬುದು ತಜ್ಞರ ಅಭಿಪ್ರಾಯ.
ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ
ಬೆಂಗಳೂರು ನಗರ
ದಿನಾಂಕ ಕೇಸ್ ಆಸ್ಪತ್ರೆ ದಾಖಲಾತಿ
ಜ.16 21,071 72
ಜ.17 15,947 81
ಜ.18 25,595 84
ಜ.19 24,135 80
ಜ.20 30,540 81
ಜ.21 29,068 87
ಜ.22 17,266 71
ಕರ್ನಾಟಕ
ದಿನಾಂಕ ಕೇಸ್ ಆಸ್ಪತ್ರೆ ದಾಖಲಾತಿ
ಜ.16 34,047 717
ಜ.17 27,156 192
ಜ.18 41,457 213
ಜ.19 40,499 447
ಜ.20 47,754 102
ಜ.21 48,049 185
ಜ.22 42,470 292