ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ಒಣ ಹಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂತಹ ಡ್ರೈ ಫ್ರೂಟ್‌ಗಳಲ್ಲಿ ಮೊದಲು ನೆನಪಾಗುವುದು ಬಾದಾಮಿ.
ಅತ್ಯಧಿಕ ಪೋಷಕಾಂಶಗಳು, ವಿಟಮಿನ್ ಮತ್ತು ಕಡಿಮೆ ಕೊಲೆಸ್ಟ್ರಾಲ್ ಇರುವ ಪದಾರ್ಥವೆಂದರೆ ಈ ಬಾದಾಮಿ. ಬಾದಾಮಿಯನ್ನು ಹಾಗೇ ತಿನ್ನುವುದಕ್ಕಿಂತ ನೆನೆಸಿ ತಿಂದರೆ ಏನು ಉಪಯೋಗ ತಿಳಿಬೇಕಾ.
* ನೆನೆಸಿದ ಬಾದಾಮಿಯ ಸೇವನೆಯು ನಿಶ್ಯಕ್ತಿಯನ್ನು ಹೋಗಲಾಡಿಸುತ್ತದೆ.
ಬಾರ್‌ನಲ್ಲಿ ಮಹಿಳೆಯನ್ನು ರಕ್ಷಿಸಲು ಬಾರ್ಟೆಂಡರ್ ಸುಲಭ ‘ಉಪಾಯ’ ನೆಟ್ಟಿಗರಿಂದ ಶ್ಲಾಘನೆ
* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿಯನ್ನು ಸೇವಿಸುವುದರಿಂದ ಬೇಗ ಹಸಿವು ಆಗುವುದಿಲ್ಲ.
* ನೆನೆಸಿದ ಬಾದಾಮಿಯ ಸೇವನೆಯಿಂದ ಮಧುಮೇಹವು ನಿಯಂತ್ರಣದಲ್ಲಿರುತ್ತದೆ.
* ನೆನಸಿದ ಬಾದಾಮಿಯನ್ನು ಗರ್ಭಿಣಿಯರು ಸೇವಿಸಿದರೆ ಹುಟ್ಟುವ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಅಂಗ ವೈಫಲ್ಯವನ್ನು ತಡೆಯಬಹುದು.
* ನೆನೆಸಿದ ಬಾದಾಮಿಯನ್ನು ಸೇವಿಸುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು.
* ನೆನೆಸಿದ ಬಾದಾಮಿಯ ಸೇವನೆಯಿಂದ ಚರ್ಮ ಮತ್ತು ಕಣ್ಣಿನ ಆರೋಗ್ಯ ಹೆಚ್ಚುತ್ತದೆ.