ಮರೆಯುವ ಸಮಸ್ಯೆ ನಿಮಗಿದ್ದರೆ ಚಿಂತೆ ಬಿಟ್ಬಿಡಿ. ನಿಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡ್ರೆ ಸಾಕು. ನಿಮ್ಮ ಮರೆಯುವ ಸಮಸ್ಯೆ ಮಾಯವಾಗುತ್ತೆ.
ಸೂರ್ಯಕಾಂತಿ ಹೂವಿನ ಬೀಜಗಳಲ್ಲಿ ವಿಟಮಿನ್ ಇ ಅಂಶವಿರುತ್ತದೆ. ಇದರಿಂದ ಮಿದುಳು ಆರಾಮವಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಕೋಲೀನ್ ಸಣ್ಣ ಪುಟ್ಟ ವಿಚಾರಗಳು ನೆನಪಿನಲ್ಲಿರುವಂತೆ ಮಾಡುತ್ತದೆ.
ಸ್ಟ್ರಾಬೆರಿ ಮತ್ತು ಬ್ಲಾಕ್ಬೆರ್ರಿಯಲ್ಲಿ ಆಂಟಿ ಆಕ್ಸಿಡೆಂಟ್ ಹೇರಳವಾಗಿರುತ್ತದೆ. ಇದು ಮಿದುಳಿಗೆ ಸಂಕೇತ ನೀಡಲು ಬಹಳ ಪ್ರಯೋಜನಕಾರಿ. ಹಣ್ಣುಗಳು ಸತ್ತ ಜೀವಕೋಶಗಳು ಮತ್ತು ಮೆದುಳಿನ ಊತ ತಡೆಗಟ್ಟಲು ಸಹಾಯಕಾರಿ.
ಪಾಲಕ್ ಒಂದು ಪೌಷ್ಠಿಕ ಆಹಾರ. ಇದರಲ್ಲಿ ಲ್ಯೂಟೀನ್ ಎಂಬ ಆಂಟಿ ಆಕ್ಸಿಡೆಂಟ್ ಗುಣವಿರುತ್ತದೆ. ನೆನಪಿನ ಶಕ್ತಿ ಹೆಚ್ಚಿಸಲು ಹಾಗೂ ಕಲಿಕೆಗೆ ಇದು ಬಹಳ ಉತ್ತಮ.
ಬಾದಾಮಿ, ಗೋಡಂಬಿ, ನೆಲಗಡಲೆಯಲ್ಲಿ ವಿಟಮಿನ್ ಇ ಇರುತ್ತದೆ. ಒಂದು ಮುಷ್ಠಿ ಬಾದಾಮಿ, ಗೋಡಂಬಿ ಹಾಗೂ ನೆಲಗಡಲೆ ಸೇವನೆ ಮಾಡುವುದರಿಂದ ಸಾಕಷ್ಟು ಜೀವಸತ್ವ ನಮ್ಮ ದೇಹವನ್ನು ಸೇರುತ್ತದೆ.
ಬೀಟ್ರೂಟ್ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ನೈಟ್ರೇಟ್ ಮಿದುಳಿನಲ್ಲಿರುವ ರಕ್ತದ ಹರಿವನ್ನು ಸುಧಾರಿಸುತ್ತದೆ.