ಓದಿದ್ದು ನೆನಪಿರಲ್ಲ ಎನ್ನೋದು ಸಾಮಾನ್ಯವಾಗಿ ಎಲ್ಲ ಮಕ್ಕಳ ಸಮಸ್ಯೆ. ಪರೀಕ್ಷೆ ಹತ್ತಿರ ಬರ್ತಾ ಇದ್ದಂತೆ ಓದಿದ್ದು ನೆನಪಿರಲ್ಲ ಎನ್ನುವ ಭಯ ಎಲ್ಲರನ್ನು ಕಾಡುತ್ತೆ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಏನು ಮಾಡೋದು ಎನ್ನುವ ಚಿಂತೆಗೆ ಬೀಳ್ತಾರೆ ಪಾಲಕರು.
ಓದಿದ ನಂತ್ರ ಮಕ್ಕಳು ಮಾಡುವ ಕೆಲಸ ಅವರ ನೆನಪಿನ ಶಕ್ತಿ ಮೇಲೆ ನೇರ ಪರಿಣಾಮ ಬೀರುತ್ತೆ. ಕಂಪ್ಯೂಟರ್ ಗೇಮ್ ಗಿಂತ ದೈಹಿಕ ಪರಿಶ್ರಮ ಪಡುವವರ ನೆನಪಿನ ಶಕ್ತಿ ಹೆಚ್ಚಿರುತ್ತದೆಯಂತೆ. ವಿಶ್ವವಿದ್ಯಾನಿಲಯವೊಂದು ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಓದಿದ ನಂತ್ರ ಕಂಪ್ಯೂಟರ್ ಗೇಮ್ ಆಡುವ ಬದಲು ಓಡಿ ಎನ್ನುತ್ತಿದೆ ಸಂಶೋಧನೆ.
ಫುಡ್ ಡೆಲಿವರಿ ಬಾಯ್ಸ್ ಫಾಸ್ಟ್‌ಗೆ ಪೊಲೀಸರ ಬ್ರೇಕ್
16-29 ವರ್ಷ ವಯಸ್ಸಿನ 60 ಜನರ ಮೇಲೆ ಈ ಪ್ರಯೋಗ ಮಾಡಲಾಗಿದೆ. 60 ಜನರನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಎಲ್ಲರಿಗೂ ಕೆಲವೊಂದು ವಿಷಯಗಳನ್ನು ಹೇಳಲಾಗಿತ್ತು. ನಂತ್ರ ಒಂದು ಗುಂಪಿಗೆ ಕಂಪ್ಯೂಟರ್ ಗೇಮ್ ಆಡುವಂತೆ ಹೇಳಲಾಯ್ತು. ಇನ್ನೊಂದು ಗುಂಪಿಗೆ ಓಡಲು ತಿಳಿಸಲಾಯ್ತು. ಮತ್ತೊಂದು ಗುಂಪಿಗೆ ಹೊರಗೆ ತಿರುಗಾಡುವಂತೆ ಸೂಚಿಸಲಾಗಿತ್ತು. ನಂತ್ರ ನಡೆದ ಪರೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಯ್ತು. ಉಳಿದವರಿಗಿಂತ ಓಟದಲ್ಲಿ ಪಾಲ್ಗೊಂಡಿದ್ದ ಜನರ ನೆನಪಿನ ಶಕ್ತಿ ಜಾಸ್ತಿ ಇತ್ತು.