ಚಳಿಗಾಲದಲ್ಲಿ ಶುಷ್ಕ ಗಾಳಿ ದೇಹದ ತೇವಾಂಶವನ್ನು ಹೀರಿಕೊಳ್ಳುವುದರಿಂದ ದೇಹ ಡ್ರೈ ಆಗುತ್ತದೆ. ಇದರಿಂದ ನೆತ್ತಿಯಲ್ಲಿ ತುರಿಕೆ ಕಂಡುಬರುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟುಮಾಡುತ್ತದೆ. ಈ ತುರಿಕೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.
*ಬಿಸಿ ಎಣ್ಣೆ ಚಿಕಿತ್ಸೆ : ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಟೀ ಟ್ರೀ ಆಯಿಲ್ ಮಿಕ್ಸ್ ಮಾಡಿ ನೆತ್ತಿಗೆ ಹಚ್ಚಿ 10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ 40 ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡಿ. ಇದರಿಂದ ನೆತ್ತಿ ತೇವಾಂಶಗೊಂಡು ತುರಿಕೆ, ತಲೆಹೊಟ್ಟು, ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.
* ಆಪಲ್ ಸೈಡರ್ ವಿನೆಗರ್ : ನೆತ್ತಿಯ ತುರಿಕೆಗೆ ಕೆಲವೊಮ್ಮೆ ಬ್ಯಾಕ್ಟೀರಿಯಾಗಳು ಕಾರಣವಾಗುತ್ತವೆ. ಹಾಗಾಗಿ ಈ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೀರಿಗೆ 2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ನೆತ್ತಿಗೆ ಹಚ್ಚಿ 2 ನಿಮಿಷ ಮಸಾಜ್ ಮಾಡಿ ತಣ್ಣೀರಿನಿಂದ ವಾಶ್ ಮಾಡಿ