ಟಿವಿಯಲ್ಲಿ ಸಿನಿಮಾ, ಧಾರಾವಾಹಿ ನೋಡುವುದು, ರೇಡಿಯೋದಲ್ಲಿ ಹಾಡು ಕೇಳುವುದು ಇವೆಲ್ಲವೂ ಈಗ ಅಪರೂಪವಾಗಿಬಿಟ್ಟಿವೆ. ಎಲ್ಲರೂ ರೀಲ್ ಪ್ರಪಂಚದಲ್ಲೇ ಈಗ ಮುಳುಗಿರುತ್ತಾರೆ. ಮಕ್ಕಳು, ವೃದ್ಧರು, ಯುವಕರು ಎಲ್ಲರೂ ಮೊಬೈಲ್‌ನಲ್ಲಿ ರೀಲ್‌ಗಳನ್ನು ನೋಡುತ್ತಾರೆ. ಬರೀ ವೀಕ್ಷಣೆ ಮಾತ್ರವಲ್ಲ ಅದೊಂದು ರೀತಿಯ ಗೀಳಾಗಿ ಬದಲಾಗಿದೆ. ಮಲಗುವಾಗ-ಏಳುವಾಗ, ತಿನ್ನುವಾಗ-ಕುಡಿಯುವಾಗ, ಪ್ರಯಾಣ ಮಾಡುವಾಗ ಹೀಗೆ ಸದಾ ರೀಲ್‌ಗಳ ಹ್ಯಾಂಗೊವರ್ ಇರುತ್ತದೆ. Instagram ಮತ್ತು YouTube ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಕ್ರೋಲಿಂಗ್ ಮಾಡುವ ಮೂಲಕ ಜನರು ರೀಲ್‌ಗಳನ್ನು ವೀಕ್ಷಿಸ್ತಾರೆ.
ಇದರಿಂದ ಸಮಯ ಹಾಳಾಗುವುದು ಮಾತ್ರವಲ್ಲ ಇನ್ನೂ ಅನೇಕ ಅಪಾಯಗಳಿವೆ. ಈ ರೀಲ್ಸ್ ಒಂದು ರೀತಿಯ ವ್ಯಾಮೋಹಕ್ಕೆ ತುತ್ತುಮಾಡುತ್ತದೆ. ಎಷ್ಟೋ ಯುವಕ ಯುವತಿಯರು ರೀಲ್ಸ್ ಚಟಕ್ಕೆ ಬಲಿಯಾಗಿದ್ದಾರೆ. ಇದು ಈಗ ಒಂದು ರೀತಿಯ ಕಾಯಿಲೆಯಾಗಿ ಹೊರಹೊಮ್ಮಲು ಪ್ರಾರಂಭಿಸಿದೆ. ಅದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿ ಮಾಡುತ್ತದೆ.
ರೀಲ್‌ಗಳು ಯಾವುವು?
ರೀಲ್‌ಗಳು Instagram ನಲ್ಲಿ ಒಂದು ರೀತಿಯ ಕಿರು ವೀಡಿಯೊಗಳಾಗಿವೆ. ಆರಂಭದಲ್ಲಿ ಈ ರೀಲ್‌ಗಳು 30 ಸೆಕೆಂಡ್‌ಗಳಷ್ಟಿದ್ದವು. ಆದರೆ ಈಗ ಅದನ್ನು 90 ಸೆಕೆಂಡುಗಳಿಗೆ ಹೆಚ್ಚಿಸಲಾಗಿದೆ. ಈ ರೀಲ್‌ಗಳ ಟ್ರೆಂಡ್ ಭಾರತದಲ್ಲಿ ಟಿಕ್‌ಟಾಕ್ ಅನ್ನು ಮುಚ್ಚಿದಾಗಿನಿಂದ ಪ್ರಾರಂಭವಾಯಿತು. ಟಿಕ್‌ಟಾಕ್ ನಿಂತ ತಕ್ಷಣ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಹಾಕಲು ನೆಟ್ಟಿಗರು ಶುರು ಮಾಡಿದರು. ರೀಲ್‌ಗಳಲ್ಲಿ ತಮಾಷೆ, ಡ್ಯಾನ್ಸ್ ಎಲ್ಲವೂ ಇರುತ್ತದೆ. ರೀಲ್‌ಗಳು ಮತ್ತೆ ಮತ್ತೆ ನೋಡುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಇನ್‌ಸ್ಟಾಗ್ರಾಮ್‌ನಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ರೀಲ್‌ಗಳನ್ನು ಹಾಕ್ತಾರೆ.
ರೀಲ್ ವೀಕ್ಷಣೆಯ ಅನಾನುಕೂಲ
ರೀಲ್‌ಗಳನ್ನು ನೋಡುವ ಮೂಲಕ ಜನರು ತಮ್ಮ ಸಮಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರೀಲ್ ವೀಕ್ಷಣೆಯಲ್ಲಿ ಗಂಟೆಗಳೇ ಪೋಲಾಗುತ್ತಿವೆ. ಇದರಿಂದ ಕೆಲಸಕ್ಕೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲ ರೀಲ್ ಚಟ ಅಂಟಿಸಿಕೊಂಡು ಹಲವರು ಮಾನಸಿಕ ಅಸ್ವಸ್ಥರಾಗುತ್ತಿದ್ದಾರೆ. ಖಿನ್ನತೆಯ ಸಮಸ್ಯೆ ಜನರಲ್ಲಿ ಕಂಡುಬರುತ್ತಿದೆ. ಅನೇಕ ಬಾರಿ, ರೀಲ್ಸ್ ನೋಡಿದಾಗ ಅವರು ತಮ್ಮಲ್ಲಿ ನ್ಯೂನತೆಗಳನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾರೆ. ಎದುರಿಗಿರುವ ವ್ಯಕ್ತಿಯೊಂದಿಗೆ ಹೋಲಿಕೆ ಮಾಡಿಕೊಳ್ತಾರೆ. ಅವರಂತೆ ಇರಲು ಪ್ರಯತ್ನಿಸುತ್ತಾರೆ.
ಇದಲ್ಲದೆ ಸ್ವತಃ ರೀಲ್‌ಗಳನ್ನು ಮಾಡಲು ಬಯಸುತ್ತಾರೆ ಮತ್ತು ಅದು ವೈರಲ್ ಆಗದಿದ್ದಾಗ ಅಥವಾ ವೀಕ್ಷಣೆಗಳನ್ನು ಪಡೆಯದಿದ್ದಾಗ ಕೋಪ ಮತ್ತು ಕಿರಿಕಿರಿಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಈ ಒತ್ತಡವು ಖಿನ್ನತೆಗೆ ತಿರುಗುತ್ತದೆ.ಇದರಿಂದಾಗಿ ಏಕಾಗ್ರತೆಯ ಕೊರತೆ, ಮನಸ್ಥಿತಿ ಏರುಪೇರು ಮುಂತಾದ ಸಮಸ್ಯೆಗಳು ಕಂಡುಬರುತ್ತಿವೆ. ಮಕ್ಕಳು ರೀಲ್ಸ್ ನೋಡುತ್ತಿದ್ದರೆ ಅದರಿಂದ ಅವರ ಓದಿಗೆ ತೊಂದರೆಯಾಗುತ್ತದೆ.
ರೀಲ್ಸ್ ಚಟದಿಂದ ಮಕ್ಕಳು ಅಧ್ಯಯನದತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ತಡರಾತ್ರಿಯಲ್ಲಿ ರೀಲುಗಳನ್ನು ನೋಡುವುದರಿಂದ ನಿದ್ದೆಗೆ ತೊಂದರೆಯಾಗುತ್ತದೆ ಮತ್ತು ಮರುದಿನ ಶಾಲೆಗೆ ಹೋಗಲು ಸಮಸ್ಯೆಯಾಗುತ್ತದೆ. ನಿದ್ರೆಯ ಕೊರತೆಯಿಂದ ಒತ್ತಡ ಪ್ರಾರಂಭವಾಗುತ್ತದೆ.ಮೊಬೈಲ್ ಸ್ಕ್ರೀನ್ ಅನ್ನು ಹೆಚ್ಚು ಸಮಯ ವೀಕ್ಷಿಸುವುದರಿಂದ ಕಣ್ಣುಗಳು ದುರ್ಬಲಗೊಳ್ಳುತ್ತವೆ. ಇದಲ್ಲದೆ ರೀಲ್‌ಗಳಿಂದ ದೈಹಿಕ ಚಟುವಟಿಕೆಯು ಕಡಿಮೆಯಾಗುತ್ತದೆ ಮತ್ತು ಜನರು ಸ್ಥೂಲಕಾಯರಾಗುತ್ತಾರೆ.