alex Certify ನೆಚ್ಚಿನ ಶಿಕ್ಷಕನನ್ನ ಭೇಟಿಯಾಗಲು ಬಂದ ಪುಟ್ಟ ಮಗು; ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಗುರು – ಶಿಷ್ಯೆ ಬಾಂಧವ್ಯದ ಸುಂದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ಶಿಕ್ಷಕನನ್ನ ಭೇಟಿಯಾಗಲು ಬಂದ ಪುಟ್ಟ ಮಗು; ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಗುರು – ಶಿಷ್ಯೆ ಬಾಂಧವ್ಯದ ಸುಂದರ ವಿಡಿಯೋ

ವಿದ್ಯಾರ್ಥಿ ಜೀವನದಲ್ಲಿ ನಡೆದ ಅದೆಷ್ಟೋ ಘಟನೆಗಳು, ಜೀವನಪರ್ಯಂತ ನೆನಪುಳಿದು ಬಿಡುತ್ತೆ. ಅದರಲ್ಲೂ ಶಾಲೆಗೆ ಹೋಗುತ್ತಿರುವ ದಿನಗಳು, ಮೊದಲ ಪಾಠ, ಶಾಲೆಯಲ್ಲಿ ಪರಿಚಯವಾದ ಹುಡುಗಿ. ಹೀಗೆ ಒಂದೋ ಎರಡೋ…… ಇದೆಲ್ಲದರ ಜೊತೆಗೆ ನಮಗೆ ಜೀವನದ ಪ್ರತಿ ಹಂತದಲ್ಲೂ ನೆನಪಾಗ್ತಾನೇ ಇರೋರು ಶಿಕ್ಷಕರು.

ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮ ತಮ್ಮ ನೆಚ್ಚಿನ ಶಿಕ್ಷಕರು ಒಬ್ಬರಲ್ಲ ಒಬ್ಬರು ಇದ್ದೇ ಇರ್ತಾರೆ. ಕೆಲವರು ಶಾಲಾ ದಿನಗಳ ನಂತರವೂ ಅವರ ಜೊತೆ ಒಡನಾಟ ಇಟ್ಟುಕೊಂಡರೆ. ಇನ್ನೂ ಕೆಲವರಿಗೆ ಅದು ಸಾಧ್ಯವಾಗಿರುವುದಿಲ್ಲ. ಆದರೆ ಒಂದಂತೂ ಸತ್ಯ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳ ನಡುವೆ ಒಂದು ಅವಿನಾಭಾವ ಸಂಬಂಧ ಇದ್ದೇ ಇರುತ್ತೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲೂ ಶಿಕ್ಷಕ ಮತ್ತು ವಿದ್ಯಾರ್ಥಿನಿಯ ನಡುವಿನ ಪ್ರೀತಿ ಬಾಂಧವ್ಯದ ವಿಡಿಯೋ ಒಂದು ವೈರಲ್ ಆಗಿದೆ.

ಈ ವೈರಲ್ ಆಗಿರುವ ವಿಡಿಯೋದಲ್ಲಿ, ಪುಟ್ಟ ಬಾಲಕಿ ಹಾಗೂ ಶಿಕ್ಷಕನ ಭೇಟಿಯ ಕ್ಷಣಗಳನ್ನ ನೋಡಬಹುದು. ಶಿಕ್ಷಕ ಹೋಟೆಲ್ ಒಂದರಲ್ಲಿ ನಿಂತಿರುತ್ತಾರೆ. ಆ ಪುಟಾಣಿ ನಾಚುತ್ತ ಶಿಕ್ಷಕನ ಬಳಿ ಹೋಗುತ್ತಾಳೆ. ಅಲ್ಲೇ ಹಿಂದೆ ನಿಂತಿರುವ ಆಕೆಯ ತಾಯಿ. ಇದೆಲ್ಲವನ್ನ ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಳ್ತಿರ್ತಾರೆ. ಇದನ್ನ ನೋಡಿದ ಆ ಬಾಲಕಿ ಇನ್ನಷ್ಟು ನಾಚಿಕೊಳ್ಳುತ್ತಾಳೆ. ಆಕೆಗೆ ತನ್ನ ಶಿಕ್ಷಕನನ್ನ ನೋಡುವ ಖುಷಿ, ಆಕೆಯ ಕಣ್ಣಲ್ಲಿ ನೋಡಬಹುದು. ಇದನ್ನ ಗಮನಿಸಿದ ಶಿಕ್ಷಕ ತನ್ನನ್ನ ಭೇಟಿಯಾಗಲೂ ಬಂದ ಪುಟಾಣಿ ವಿದ್ಯಾರ್ಥಿನಿಯನ್ನ ನಗುನಗುತ್ತಲೇ ಎತ್ತಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಶೀರ್ಷಿಕೆಯಲ್ಲಿ, `ಈ ವಿಡಿಯೋ ನನ್ನಂತೆಯೇ ನಿಮ್ಮ ಮೊಗದಲ್ಲೂ ನಗು ತರಿಸುತ್ತೆ` ಅಂತ ಬರೆಯಲಾಗಿದೆ. ಸುಮಾರು 1.93 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನ ವೀಕ್ಷಿಸಿದ್ದಾರೆ. ಲಕ್ಷಕ್ಕೂ ಹೆಚ್ಚು ಜನರು ಇದನ್ನ ಇಷ್ಟಪಟ್ಟಿದ್ದಾರೆ.

ನೆಟ್ಟಿಗರು ಈ ವಿಡಿಯೋ ನೊಡಿ ತಮ್ಮ ತಮ್ಮ ಭಾವವನ್ನ ಕಾಮೆಂಟ್ ಬಾಕ್ಸ್​​ಲ್ಲಿ ವ್ಯಕ್ತಪಡಿಸಿದ್ದಾರೆ. ಒಬ್ಬರು ನಾನೂ ಕೂಡಾ ಬಿಡುವಿನ ಸಮಯದಲ್ಲಿ ನನ್ನ ವಿದ್ಯಾರ್ಥಿಗಳನ್ನ ಭೇಟಿ ಮಾಡಲು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬರು ` ಇದು ಮುದ್ದಾದ ವಿಡಿಯೋ `ಅಂತ ಬರೆದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂ ರೀತಿಯಲ್ಲಿ ತಮ್ಮ ಭಾವವನ್ನ ಬರೆದುಕೊಂಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...