ನೆಲನೆಲ್ಲಿ ಅಥವಾ ನೆಗ್ಗಿನಮುಳ್ಳಿನ ಗಿಡ ಎಂದು ಕರೆಯುವ ಈ ಗಿಡ ಗದ್ದೆಯ ಬದುಗಳಲ್ಲಿ ಬೆಳೆಯುತ್ತದೆ. ಹುಣಸೆ ಎಲೆಯನ್ನು ಹೋಲುವ ಈ ಸಸ್ಯದ ಎಲೆಗಳು ಚಿಕ್ಕ ಚಿಕ್ಕ ದಳಗಳನ್ನು ಹೊಂದಿದೆ. ಏಪ್ರಿಲ್ ನಿಂದ ಆಕ್ಟೊಬರ್ ತಿಂಗಳಲ್ಲಿ ಹಳದಿ ಬಣ್ಣದ 5 ದಳಗಳಿಂದ ಕೂಡಿದ ಚಿಕ್ಕ ಚಿಕ್ಕ ಹೂವುಗಳು ಅರಳುತ್ತವೆ.
ಆಯುರ್ವೇದ ಮತ್ತು ಯುನಾನಿ ಚಿಕಿತ್ಸೆಯಲ್ಲಿ ಈ ಸಸ್ಯ ಬಳಸಲ್ಪಡುತ್ತದೆ. ಚೀನೀಯರ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲೂ ಈ ಸಸ್ಯವನ್ನು ಬಳಸಲಾಗುತ್ತದೆ. ಇದರ ಮುಳ್ಳು, ಬೇರು ಮತ್ತು ಹಣ್ಣುಗಳು ಕಿಡ್ನಿ, ಕರುಳು ಹಾಗೂ ಶರೀರದ ಎಲ್ಲ ಅಂಗಾಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಫಂಗಸ್ ಮತ್ತು ಬ್ಯಾಕ್ಟೀರಿಯಾಗಳಿಂದಾದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ನೆಗ್ಗಿನಮುಳ್ಳಿನ ಪುಡಿಯು ಮಾರುಕಟ್ಟೆಗಳಲ್ಲಿ ಲಭ್ಯವಿದೆ.
ಮೂತ್ರಕೋಶದ ಕಲ್ಲುಗಳನ್ನು ಗುಣಪಡಿಸಲು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾರ್ಮೋನುಗಳ ಅಸಮತೋಲನೆಯನ್ನು ಸರಿಪಡಿಸಲು ಶಕ್ತಿವರ್ಧಕವಾಗಿ ಬಳಸುತ್ತಾರೆ.