ಕೆಮ್ಮು – ನೆಗಡಿಗೆ ಸಂಬಂಧಿಸಿದ ಔಷಧಗಳು ಅಪಾಯಕಾರಿ, ಇವುಗಳಲ್ಲಿ ಫೋಲ್ಕೊಡಿನ್ ಅನ್ನು ಬಳಸಲಾಗುತ್ತದೆ. ಹಾಗಾಗಿ ಅವುಗಳನ್ನು ಸೇವನೆ ಮಾಡದಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ‘ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾʼ ಕೆಮ್ಮಿನ ಸಿರಪ್‌ನಲ್ಲಿ ಪೋಲ್ಕೊಡಿನ್ ಬಳಸದಂತೆ ಈಗಾಗ್ಲೇ ಸೂಚನೆ ನೀಡಿದೆ. WHO ಪ್ರಕಾರ ‘ಫೋಲ್ಕೊಡೈನ್’ ಒಪಿಯಾಡ್ ಔಷಧಿಯಾಗಿದ್ದು, ವಯಸ್ಕರು ಮತ್ತು ಮಕ್ಕಳಲ್ಲಿ ಉತ್ಪಾದಕವಲ್ಲದ (ಶುಷ್ಕ) ಕೆಮ್ಮಿನ ಚಿಕಿತ್ಸೆಗಾಗಿ ಇದನ್ನು ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಬಳಸಲಾಗುತ್ತದೆ.
ಮಾತ್ರೆಗಳು ಮತ್ತು ಸಿರಪ್ ರೂಪದಲ್ಲಿ ಇದು ಲಭ್ಯ. ಕನಿಷ್ಠ 12 ತಿಂಗಳ ಮೊದಲು ಫೋಲ್ಕೊಡಿನ್ ಅನ್ನು ಬಳಸಿದ ಜನರಲ್ಲಿ ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆಗಳ ಅಪಾಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಸಬ್ಜೆಕ್ಟ್ ಎಕ್ಸ್‌ಪರ್ಟ್ ಕಮಿಟಿ (ಆಂಟಿಮೈಕ್ರೊಬಿಯಲ್ ಮತ್ತು ಆಂಟಿವೈರಲ್) ಎಂಬ ವಿಶೇಷ ಸಮಿತಿಯು ಪೋಲ್ಕೊಡೈನ್ ಬಳಕೆಯ ವಿರುದ್ಧ ಪುರಾವೆಗಳನ್ನು ಪರಿಶೀಲಿಸಿ, ಆರೋಗ್ಯ ವೃತ್ತಿಪರರು, ವೈದ್ಯರು ಮತ್ತು ಗ್ರಾಹಕರಿಗೆ ಶಿಫಾರಸುಗಳನ್ನು ಸೂಚಿಸಿದೆ.
ಅವರ ಪ್ರಕಾರ ಕೆಮ್ಮು ಮತ್ತು ಶೀತದ ಚಿಕಿತ್ಸೆಗಾಗಿ ಫಾಲ್ಕೊಡಿನ್ ಹೊಂದಿರುವ ಔಷಧಿಗಳನ್ನು ತೆಗೆದುಕೊಳ್ಳಬಾರದು. ಇದು ನೇರವಾಗಿ ರೋಗಿಯ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ.ಫೋಲ್ಕೊಡಿನ್ ರೋಗನಿರೋಧಕ ಔಷಧ.ಫೋಲ್ಕೊಡೈನ್ ಕೆಮ್ಮನ್ನು ನಿಗ್ರಹಿಸುವ ಎಂಟಿಟಸ್ಸಿವ್ ಔಷಧಿಗಳ ಗುಂಪಿಗೆ ಸೇರಿದೆ. ಇದು ಕೆಮ್ಮು ನಿವಾರಕ ಒಪಿಯಾಡ್ ಉತ್ಪನ್ನ. ಮೆದುಳಿನಲ್ಲಿರುವ ಕೆಮ್ಮು ಕೇಂದ್ರವನ್ನು ನಿಗ್ರಹಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಎಲ್ಲಾ ಮೆಡಿಕಲ್‌ಗಳಲ್ಲಿ ಲಭ್ಯವಿರುವ ಶೀತ ಮತ್ತು ಕೆಮ್ಮಿನ ಔಷಧಗಳಲ್ಲಿ ಇದನ್ನು ಬಳಸಲಾಗುತ್ತಿದೆ.