
ಪ್ರತಿಯೊಬ್ಬರಿಗೂ ವಿವಾಹವು ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ. ಮೋಜು-ಮಸ್ತಿ, ಭಾವನೆಗಳಿಗೂ ಇಲ್ಲಿ ಜಾಗವಿದೆ. ವಧು-ವರರು ಪರಸ್ಪರ ನೃತ್ಯ ಮಾಡುತ್ತಾ ತಮ್ಮ ಭಾವನೆಗಳನ್ನು ಗೌರವಿಸುತ್ತಾರೆ.
ಇಂತಹ ಒಂದು ಭಾವನಾತ್ಮಕ ಕ್ಷಣದ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣುಗಳು ಕೂಡ ತೇವಗೊಳ್ಳಬಹುದು.
ಹೌದು, ವಧು ತನಗಾಗಿ ನೃತ್ಯ ಪ್ರದರ್ಶನವನ್ನು ಅರ್ಪಿಸಿದಾಗ ವರ ಕಣ್ಣೀರಿಡುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ವರನು ತನ್ನ ಮೆರವಣಿಗೆಯೊಂದಿಗೆ ವಿವಾಹದ ಸ್ಥಳಕ್ಕೆ ತಲುಪುತ್ತಿದ್ದಂತೆ, ವಧು ಆತನಿಗಾಗಿ ನೃತ್ಯ ಪ್ರದರ್ಶನವನ್ನು ಅರ್ಪಿಸುವ ಮೂಲಕ ಆತನನ್ನು ಆಶ್ಚರ್ಯಗೊಳಿಸಿದ್ದಾಳೆ. ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಸುಂದರವಾಗಿ ಕಂಗೊಳಿಸುತ್ತಿರುವ ವಧು ʼಮೇರೆ ಹಾಥ್ ಮೇ ಹೈ ಜೋ ಮೆಹಂದಿʼ ಹಾಡಿಗೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.
ಮದುಮಗಳು ಹಾಡಿಗೆ ನೃತ್ಯ ಮಾಡುತ್ತಿದ್ದಂತೆ, ವರ ಕಣ್ಣೀರು ಹಾಕಿದ್ದಾನೆ. ಕೊನೆಗೆ ವಧು ವರನ ಕಣ್ಣೀರನ್ನು ಒರೆಸಿ ಅಪ್ಪಿಕೊಂಡಿರುವುದು ಹೃದಯಸ್ಪರ್ಶಿಯಾಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಈ ವಿಡಿಯೋಗೆ ಸಾವಿರಾರು ಲೈಕ್ಸ್ ಗಳು ಬಂದಿದ್ದು, ಜೋಡಿಯ ಬಂಧದ ಬಗ್ಗೆ ನೆಟ್ಟಿಗರು ಚಕಿತಗೊಂಡಿದ್ದಾರೆ. ದಂಪತಿಗಳ ಅಮೂಲ್ಯವಾದ ಪ್ರತಿಕ್ರಿಯೆಯು ಪರಸ್ಪರ ಮದುವೆಯಾಗಲು ಎಷ್ಟು ಸಂತೋಷವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.