
ನೃತ್ಯ ನಿರ್ದೇಶಕ ರಾಜೇಶ್ ಮಾಸ್ಟರ್ ದಿಢೀರನೆ ನಿಧನರಾಗಿರೋ ಆಘಾತದ ಸುದ್ದಿ ಹೊರಬಿದ್ದಿದೆ. ಅವರ ಸಾವಿನ ಕಾರಣದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣಗಳಿಲ್ಲದಿದ್ದರೂ, ನಿಗೂಢ ಕಾರಣಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಅಸಾಧಾರಣ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ರಾಜೇಶ್ ಅವರು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ರಾಜೇಶ್ ಮಾಸ್ಟರ್ ಸಾವಿನ ಸುದ್ದಿ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.
ಮಲಯಾಳಂ ಚಿತ್ರರಂಗದ ನಟಿ ದೇವಿ ಚಂದನಾ ಅವರು ಫೇಸ್ಬುಕ್ ನಲ್ಲಿ ರಾಜೇಶ್ ಮಾಸ್ಟರ್ ಅವರೊಂದಿಗಿನ ಕೆಲವು ಫೋಟೋಗಳನ್ನು ಹಂಚಿಕೊಂಡು ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.
“ಅತ್ಯಂತ ಆಘಾತಕಾರಿ……. ರಾಜೇಶ್ ಮಾಸ್ಟರ್ ನಮ್ಮನ್ನು ಅಗಲಿದ್ದಾರೆ ಎಂದು ನಂಬಲು ಸಾಧ್ಯವಿಲ್ಲ. ನೀವು ನನ್ನ ಜೀವನಕ್ಕೆ ಸಿನಿಮಾ ಮತ್ತು ಬಾಲಿವುಡ್ ನಡೆಗಳ ಕಲೆಯನ್ನು ಸೇರಿಸಿದ್ದೀರಿ… ನೀವು ನನಗೆ ಕೊನೆಯದಾಗಿ ನಿನ್ನೆ ಸಂದೇಶ ಕಳುಹಿಸಿದ್ದೀರಿ ಎಂದು ನಂಬಲಾಗುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪೋಸ್ಟ್ ಮಾಡಿದ್ದಾರೆ.
ನಟಿ ಬೀನಾ ಆಂಟೋನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರಾಜೇಶ್ ಮಾಸ್ಟರ್ ಅವರ ಫೋಟೋವನ್ನು ಹಂಚಿಕೊಂಡು, ಸಾವಿನ ಬಗ್ಗೆ ಆಘಾತ ಹೊರಹಾಕಿದ್ದಾರೆ. ರಾಜೇಶ್ ಮಾಸ್ಟರ್ ಸಾವಿಗೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.