alex Certify ನೃತ್ಯಗಾತಿ ಸಪ್ನಾ ಚೌಧರಿ ಹಾಡಿಗೆ ವ್ಯಕ್ತಿಯೊಬ್ಬರ ಬೊಂಬಾಟ್ ಸ್ಟೆಪ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೃತ್ಯಗಾತಿ ಸಪ್ನಾ ಚೌಧರಿ ಹಾಡಿಗೆ ವ್ಯಕ್ತಿಯೊಬ್ಬರ ಬೊಂಬಾಟ್ ಸ್ಟೆಪ್ಸ್..!

ಬಿಗ್‍ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ನೃತ್ಯ ಪ್ರದರ್ಶನವನ್ನು ವೀಕ್ಷಿಸಲು ಹರಿಯಾಣದಲ್ಲಿ ಅಭಿಮಾನಿಗಳು ಮುಗಿಬೀಳುತ್ತಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ಸಪ್ನಾ ಅವರ ಹಾಡಿಗೆ, ಹಿರಿಯ ವ್ಯಕ್ತಿಯೊಬ್ಬರು ವೇದಿಕೆಯಲ್ಲಿ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

ನಟ ಸುನಿಲ್ ಗ್ರೋವರ್ ಅವರು ಎರಡು ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಪ್ನಾ ಚೌಧರಿ ಅವರ ಹಾಡಿನ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರು ಬಹಳ ಖುಷಿಯಿಂದ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ವೈರಲ್ ಆಗಿದ್ದು, 1.7 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ವಿಡಿಯೋದಲ್ಲಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ ವ್ಯಕ್ತಿಯೊಬ್ಬ ಮಹಿಳಾ ನರ್ತಕಿಯೊಂದಿಗೆ ನೃತ್ಯ ಮಾಡಿದ್ದಾರೆ. ಅವರ ಹಿಂದೆ ಹಳದಿ ಬಟ್ಟೆಯನ್ನು ಧರಿಸಿರುವ ಹಲವಾರು ಹಿನ್ನೆಲೆ ನೃತ್ಯಗಾರರನ್ನು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಮುಂಭಾಗದಲ್ಲಿ ನೃತ್ಯ ಮಾಡುವ ವ್ಯಕ್ತಿ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ.

ವ್ಯಕ್ತಿಯು ಹಾಡಿಗೆ ತಕ್ಕಂತೆ ಜಿಗಿಯುತ್ತಾ, ಆಕರ್ಷಕವಾಗಿ ಡಾನ್ಸ್ ಮಾಡಿದ್ದಾರೆ. ಸ್ಟೆಪ್ಸ್ ಹಾಕುತ್ತಾ ವೇದಿಕೆಯ ಮೇಲೆ ಮಲಗಿದ ರೀತಿಯಲ್ಲಿ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ.  ಹಾವಿನ ರೀತಿ ನೃತ್ಯ ಮಾಡಿದ್ದನ್ನು ಕಂಡ ಇಡೀ ಪ್ರೇಕ್ಷಕರನ್ನು ನಗುವಂತೆ ಮಾಡಿದೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರನ್ನು ರಂಜಿಸಿದೆ. ಇನ್ಸ್ಟಾಗ್ರಾಂ ಬಳಕೆದಾರರು ನಗುವ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ.

https://youtu.be/9kNIGEkAH8c

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...