ಪೌರಾಣಿಕ ಕಥೆಗಳಲ್ಲಿ ‘ಪಾತಾಳ ಲೋಕ’ದ ಪ್ರಸ್ತಾಪವನ್ನು ನಾವೆಲ್ಲ ಅನೇಕ ಬಾರಿ ಕೇಳಿದ್ದೇವೆ. ಆ ಕಥೆಗಳ ಪ್ರಕಾರ ‘ಪಾತಾಳ ಲೋಕ’ ರಾಕ್ಷಸ ಶಕ್ತಿಗಳು ನೆಲೆಸಿರುವ ಸ್ಥಳ. ಆಳವಾದ ಸಂಶೋಧನೆಯ ನಂತರ ವಿಜ್ಞಾನಿಗಳು ಪಾತಾಳ ಲೋಕವನ್ನು ತಲುಪಲು ಪ್ರಯತ್ನಿಸುತ್ತಲೇ ಇದ್ದರು. ‘ಪಾತಾಳ ಲೋಕ’ ಕೇವಲ ಕಥೆಯ ಒಂದು ಭಾಗವಲ್ಲ, ನಿಜವಾದ ಜಗತ್ತು ಎಂಬುದು ಇದೀಗ ಬಹಿರಂಗವಾಗಿದೆ. ಭೂಮಿಯ ಮೇಲ್ಮೈ ಕೆಳಗೆ ಆಳವಾದ ಹೊಂಡವನ್ನು ಅಗೆದರೆ ನಾವು ಪಾತಾಳ ಲೋಕವನ್ನು ತಲುಪಬಹುದು ಎಂದು ಅನೇಕ ಸ್ಥಳಗಳಲ್ಲಿ ಉಲ್ಲೇಖಿಸಲಾಗಿದೆ.
ವಿಜ್ಞಾನಿಗಳು ಇದೇ ರೀತಿ ಮಾಡಿದ್ದಾರೆ. ಸಂಶೋಧನೆಯಲ್ಲಿ ನೆಲದಿಂದ ಸುಮಾರು 100 ಮೈಲುಗಳ ಕೆಳಗೆ ಸಂಪೂರ್ಣವಾಗಿ ಕರಗಿದ ಕಲ್ಲಿನ ಪದರ ಪತ್ತೆಯಾಗಿದೆ. ಸಂಶೋಧಕರಿಗೆ ನೆಲದ ಕೆಳಗೆ ತಲುಪಲು ಸಾಧ್ಯವಾಗಿದ್ದು ಇದೇ ಮೊದಲು.ಈ ಪದರವು ಅಸ್ತೇನೋಸ್ಪಿಯರ್‌ನ ಕೆಳಗೆ ಇದೆ. ಅಸ್ತೇನೋಸ್ಪಿಯರ್ ಭೂಮಿಯಿಂದ ತುಂಬಾ ಕೆಳಗಿರುತ್ತದೆ, ಇದು ತುಂಬಾ ದುರ್ಬಲ ಪದರವಾಗಿದೆ, ಯಾವಾಗಲೂ ಚಲಿಸುತ್ತಲೇ ಇರುತ್ತದೆ. ಅಸ್ತೇನೋಸ್ಪಿಯರ್ ಅನ್ನು ಅಧ್ಯಯನ ಮಾಡುವ ಮೂಲಕ ಸಾಕಷ್ಟು ಮಾಹಿತಿಯನ್ನು ಪಡೆಯಬಹುದು ಎನ್ನುತ್ತಾರೆ ಸಂಶೋಧಕರು. ಇದನ್ನು ಹೊರತುಪಡಿಸಿ ಭವಿಷ್ಯದಲ್ಲಿ ಯಾವಾಗ ಮತ್ತು ಎಷ್ಟು ಬಾರಿ ಭೂಕಂಪಗಳು ಸಂಭವಿಸಬಹುದು ಎಂಬುದನ್ನು ಸಹ ಲೆಕ್ಕಹಾಕಬಹುದು.
ಪ್ರಸ್ತುತ ಭೂಕಂಪ ಯಾವಾಗ ಮತ್ತು ಎಲ್ಲಿ ಸಂಭವಿಸುತ್ತದೆ ಎಂಬುದನ್ನು ಊಹಿಸುವುದು ತುಂಬಾ ಕಷ್ಟ. ಭೂಮಿಯ ಅಡಿಯಲ್ಲಿ ಕಂಡು ಬರುವ ಜಿಗುಟಾದ ಮತ್ತು ದ್ರವ ಪದಾರ್ಥವನ್ನು ಅಧ್ಯಯನ ಮಾಡಿದ ನಂತರ, ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಅದರ ವ್ಯಾಪ್ತಿ ತುಂಬಾ ದೊಡ್ಡದಾಗಿದೆ ಎಂದು ಕಂಡು ಹಿಡಿದಿದ್ದಾರೆ. ಅದರಲ್ಲಿ 44 ಪ್ರತಿಶತದಷ್ಟು ಗ್ರಹವನ್ನು ಸುತ್ತುವರೆದಿರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಅಧ್ಯಯನವನ್ನು ನೇಚರ್ ಜಿಯೋಸೈನ್ಸ್‌ನಲ್ಲಿ ಪ್ರಕಟಿಸಲಾಗಿದೆ. ನೆಲದಡಿಯಲ್ಲಿರುವ ಈ ಪದರವನ್ನು ಅಧ್ಯಯನ ಮಾಡುವ ಮೂಲಕ ಭವಿಷ್ಯದ ಭೂಕಂಪಗಳ ಸ್ಥಿತಿಗತಿ ತಿಳಿಯಬಹುದು ಅನ್ನೋದು ಆಶಾದಾಯಕ ಸಂಗತಿ ಎನಿಸಿದೆ.