alex Certify ನೂರಾರು ಕೋಟಿ ಲೋನ್ ಕೊಡಿಸುವುದಾಗಿ ವಂಚನೆ, ಐವರು ಆರೋಪಿಗಳು ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂರಾರು ಕೋಟಿ ಲೋನ್ ಕೊಡಿಸುವುದಾಗಿ ವಂಚನೆ, ಐವರು ಆರೋಪಿಗಳು ಅಂದರ್

ನೂರಾರು ಕೋಟಿ ಲೋನ್ ಕೊಡಿಸೋದಾಗಿ ಭರವಸೆ ನೀಡಿ, ಐದು ಕೋಟಿ ಮುಂಗಡ ಹಣ ಪಡೆದು ವಂಚಿಸಿರೊ ಘಟನೆಗೆ ಸಂಬಂದಿಸಿದಂತೆ ಐವರು ವಂಚಕರನ್ನ ಪೊಲೀಸರು ಬಂಧಿಸಿದ್ದಾರೆ. ನಗರದ ಸುದ್ದಗುಂಟೇಪಾಳ್ಯ ಪೊಲೀಸ್ರಿಂದ ಐವರು ಅಂತರಾರಾಜ್ಯ ವಂಚಕರ ಬಂಧನವಾಗಿದೆ. ಪ್ರಮುಖ ಆರೋಪಿ ಅಬ್ದುಲ್ ಜಮಾಕ್ ಸೈಯದ್ ಇಬ್ರಾಹಿಂ ಅಲಿಯಾಸ್ ಹ್ಯಾಮ್ ಸ್ಟ್ರಾಂಗ್, ವಿವೇಕ್, ಶಿವರಾಮ್ ರಘುವರನ್ ಹಾಗೂ ಕ್ರಿಸ್ಟೋಫರ್ ಬಂಧಿತ ಆರೋಪಿಗಳು.

ಇಬ್ಬರು ಉದ್ಯಮಿಗಳಿಗೆ 390 ಕೋಟಿ‌ ಲೋನ್ ಕೊಡಿಸೊ ಭರವಸೆ ನೀಡಿದ್ದ ವಂಚಕರು, ಲೋನ್ ನೀಡಲು 5 ಕೋಟಿ 80 ಲಕ್ಷ ಮುಂಗಡ ಬಡ್ಡಿ ಹಣ ಪಡೆದಿದ್ದರು. ಹಣ ಸಿಗುತ್ತಿದ್ದಂತೆ ಉದ್ಯಮಿಗಳಿಗೆ ಕೈಕೊಟ್ಟು ಪರಾರಿಯಾಗಿದ್ದರು. ತಮಗಾದ ಮೋಸ ತಿಳಿದ ಉದ್ಯಮಿ ಗಿರೀಶ್ ಹಾಗೂ ಪಣಿರತನ್ ಪೊಲೀಸರಿಗೆ ದೂರು ನೀಡಿದ್ದಾರೆ. ‌

ವಂಚನೆ ಪ್ರಕರಣ ದಾಖಲಿಸಿಕೊಂಡ ಸುದ್ದಗುಂಟೆಪಾಳ್ಯ ಪೊಲೀಸರು, ಐವರನ್ನ ಬಂಧಿಸಿದ್ದಾರೆ. ಬಂಧಿತರಿಂದ 36 ಲಕ್ಷ ಹಣ, 8.5kg ಚಿನ್ನ ವಶಪಡಿಸಿಕೊಳ್ಳಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...