ನುಗ್ಗೆಕಾಯಿ ಮಾತ್ರವಲ್ಲ ನುಗ್ಗೆ ಮರದ ಸೊಪ್ಪನ್ನು ಕೂಡಾ ಅಡುಗೆಗೆ ಬಳಸಬಹುದು ಮತ್ತು ಇದರಿಂದ ಹಲವು ಆರೋಗ್ಯದ ಪ್ರಯೋಜನಗಳು ಇವೆ ಎಂಬುದು ನಿಮಗೆ ತಿಳಿದಿದೆಯೇ…?
ನುಗ್ಗೆಸೊಪ್ಪಿನಿಂದ ಸಾಂಬಾರ್, ತಂಬುಳಿ, ಪಲ್ಯ ಹಾಗೂ ರೊಟ್ಟಿ ತಯಾರಿಸಬಹುದು. ಇದರಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಹೀಗಾಗಿ ಅಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಇದನ್ನು ಸೇವಿಸಬಹುದು.
ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ ಗಳು, ವಿಟಮಿನ್ ‘ ಸಿ ‘, ಜಿಂಕ್ ಮತ್ತು ಇತರ ಸಕ್ರಿಯ ವಸ್ತುಗಳಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ ಕೋಶಗಳ ವಿರುದ್ಧ ಹೋರಾಡಿ ದೇಹಕ್ಕೆ ಶಕ್ತಿ ತುಂಬುತ್ತದೆ.
ನಮ್ಮ ದೇಹದಲ್ಲಿ ಲಿವರ್ ಸರಿಯಾಗಿ ಕೆಲಸ ಮಾಡುತ್ತಿರಬೇಕಾದರೆ ನುಗ್ಗೆ ಸೊಪ್ಪನ್ನು ಆಗಾಗ ತಿನ್ನುತ್ತಿರಬೇಕು. ಇದು ಲಿವರ್ ನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ.
ಸತತವಾಗಿ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಮಧುಮೇಹದಿಂದ ದೂರವಿರಬಹುದು. ಇದು ಕಣ್ಣಿನ ಆರೋಗ್ಯಕ್ಕೂ ಸಹಕಾರಿ.