ಮಂಡ್ಯ: ಆಡಿಯೋ ಬಾಂಬ್ ಇದೆ, ಮಿಸೈಲ್ಸ್ ಇದೆ ಇಂತದ್ದೆಲ್ಲ ಹೇಳಿಕೆಗಳನ್ನು ಕೊಡುತ್ತಿರುವ ಜೆಡಿಎಸ್ ನಾಯಕರು ಶಾಸಕರಾ ಅಥವಾ ಟೆರರಿಸ್ಟ್ ಗಳಾ? ಎಂದು ಸಂಸದೆ ಸುಮಲತಾ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಜನಪ್ರತಿನಿಧಿಗಳಾಗಿ ತಮ್ಮ ಬಳಿ ಅಸ್ತ್ರಗಳಿವೆ, ಆಡಿಯೋ ಬಾಂಬ್ ಇದೆ, ಮಿಸೈಲ್ಸ್ ಇದೆ ಎಂದೆಲ್ಲ ಹೇಳಿಕೆಗಳನ್ನು ನೀಡುತ್ತಿದ್ದೀರಲ್ಲ ನೀವೆಲ್ಲ ಶಾಸಕರೋ ಅಥವಾ ಟೆರರಿಸ್ಟ್ ಗಳೋ? ಜನಪರ ಕಾಳಜಿ ವಹಿಸುವವರು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡ ರಾಜಕಾರಣಿಗಳು ಆಡುವ ಮಾತೇ ಇದು ? ಮಹಿಳೆಯರ ಬಗ್ಗೆ ಗೌರವವಿಲ್ಲ, ಬಳಸುವ ಪದ ಪ್ರಯೋಗದ ಮೇಲೆ ಹಿಡಿತವಿಲ್ಲ ಇಂತವರನ್ನು ಹೇಗೆ ಸಮರ್ಥಿಸಿಕೊಳ್ಳುವುದು. ಜನಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆಗಳು ಜನರಿಗೆ ಅರ್ಥವಾಗಲ್ಲ ಎಂದುಕೊಳ್ಳಬೇಡಿ. ನಿಮ್ಮ ಹೇಳಿಕೆಗಳಿಗೆ ಮಂಡ್ಯದ ಜನರು ಹೆದರುವುದೂ ಇಲ್ಲ, ಸೊಪ್ಪು ಹಾಕಲ್ಲ ಎಂದು ತಿರುಗೇಟು ನೀಡಿದ್ದಾರೆ.
ದರೋಡೆ ನಡೆಸಿದ ಮನೆಯಲ್ಲಿ ಕ್ಷಮಾಪಣಾ ಪತ್ರ ಬರೆದಿಟ್ಟು ಹೋದ ಕಳ್ಳ….!
ಅಕ್ರಮ ಗಣಿಗಾರಿಕೆ ಪ್ರದೇಶದ ಇಂದಿನ ಭೇಟಿ ಪೂರ್ವನಿಗದಿತ ಕಾರ್ಯಕ್ರಮ. ನಾನು ಗಣಿಗೆ ಹೋಗುತ್ತಿರುವುದು ಹಣ ವಸೂಲಿಗಾಗಿಯೇ. ಆದರೆ ಅದು ಸುಮಲತಾಗಲ್ಲ, ಸರ್ಕಾರಕ್ಕೆ. ದುಡ್ದಿನ ಬಗ್ಗೆ ದುರಾಸೆ ಯಾರಿಗಿದೆ ಎಂಬುದು ಅವರ ಮಾತಲ್ಲೇ ಸ್ಪಷ್ಟ ಆಗುತ್ತೆ. ಕುಮಾರಸ್ವಾಮಿ ಅವರ ಸ್ವಭಾವನೇ ಅಂತದ್ದು, ಅವರ ಮಾತು, ಪದ ಬಳಕೆಯ ಮೇಲೆಯೇ ಅವರ ಸಂಸ್ಕಾರ ಎಂತಾದ್ದು ಎಂಬುದು ಗೊತ್ತಾಗುತ್ತಿದೆ. ಈಗಷ್ಟೇ ಅಲ್ಲ ಚುನಾವಣೆ ಸಂದರ್ಭದಿಂದಲೂ ನೋಡುತ್ತಿದ್ದೇನೆ, ಇಡೀ ಪ್ರಂಪಂಚವೂ ನೋಡಿದೆ. ಬಾಯಿಗೆ ಬಂದಂತೆ ಮಾತು ಹೇಳುವುದು ಅದನ್ನು ಸಮರ್ಥನೆ ಮಾಡಿಕೊಳ್ಳುವುದು, ಬಳಿಕ ನಾನು ಹಾಗೆ ಹೇಳಿಯೇ ಇಲ್ಲ ಎಂದು ಹೇಳುವುದು. ಇದು ಅವರ ಸಂಸ್ಕೃತಿಯನ್ನು ತೋರುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿಯವರು ಮಂಡ್ಯದಲ್ಲಿ ಮಾತ್ರವಲ್ಲ ಯಾವ ಕ್ಷೇತ್ರದಲ್ಲಿ ಗೆದ್ದಿದ್ದಾರೆ ? ಮಂಡ್ಯದ ಮೇಲೆ ಯಾಕೆ ಫೋಕಸ್ ? ಬೇರೆ ಕ್ಷೇತ್ರದವರು ಕಾರ್ಯಕರ್ತರಲ್ಲವೇ ? ನಿಮ್ಮ ಪಕ್ಷದವರಲ್ಲವೇ ? ಆ ಕ್ಷೇತ್ರಗಳ ಬಗ್ಗೆ ಯಾಕೆ ಕಾಳಜಿ ಇಲ್ಲ ಕೇವಲ ಮಂಡ್ಯದ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತೀರಾ ? ಎಂದು ಪ್ರಶ್ನಿಸಿದ್ದಾರೆ.