ಎಮೋಷನಲ್ ಈಟಿಂಗ್, ಅಂದರೆ ಬಾಯಿ ಚಪಲಕ್ಕೆ ಅಥವಾ ಚಿಂತೆಯಿಂದ ತಿಂದರೆ ಅಂಥವರು ದಪ್ಪ ಆಗುವುದಿಲ್ಲ ಎಂಬುದನ್ನು ಅಧ್ಯಯನವೊಂದು ಸಾಬೀತುಪಡಿಸಿದೆ.
ಸಾಮಾನ್ಯವಾಗಿ ಹಸಿವಿಲ್ಲದಿದ್ದರೂ ಚಪಲಕ್ಕೆ ತಿನ್ನುವವರು ಅಥವಾ ಪ್ರೇಮ ವೈಫಲ್ಯ ಮುಂತಾದವು ಸಂಭವಿಸಿದಾಗ ನೆಗೆಟಿವ್ ಫೀಲಿಂಗ್‌ನಲ್ಲಿ ಅತಿಯಾಗಿ ತಿನ್ನುವವರು ದಪ್ಪ ಆಗುತ್ತಾರೆ ಎಂಬ ಭಾವನೆ ಇದೆ.
ಆದರೆ ಇಲ್ಲಿ ಎರಡು ಹಂತದಲ್ಲಿ ಅಧ್ಯಯನ ನಡೆಸಲಾಗಿದೆ. ಮೊದಲ ಹಂತದಲ್ಲಿ ಬೇಕಾಬಿಟ್ಟಿ ತಿಂದರೂ ಶೇ. 62.7 ಮಂದಿ ದಪ್ಪ ಆಗಿಲ್ಲ. ಹಾಗೇ ಎರಡನೇ ಹಂತದಲ್ಲಿ ಪ್ರೇಮವೈಫಲ್ಯಕ್ಕೆ ಒಳಗಾದವರನ್ನು ಪರೀಕ್ಷೆಗೆ ಒಳಪಡಿಸಿದರೂ ಅವರಲ್ಲಿ ಶೇ.65.3 ಮಂದಿ ದಪ್ಪ ಆಗಿಲ್ಲ ಎಂಬುದು ಅಧ್ಯಯನದಿಂದ ಸಾಬೀತಾಗಿತ್ತು.