
ಟಿವಿಯನ್ನು ನಿಯಮಿತ ದೂರದಿಂದ ನೋಡದೆ ಹೋದರೆ ಸ್ವಲ್ಪ ಸಮಯದಲ್ಲಿಯೇ ಕಣ್ಣಿಗೆ ಸಂಬಂಧಪಟ್ಟಂತಹ ಕಾಯಿಲೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ರಾತ್ರಿ ವೇಳೆಯಲ್ಲಿ ಟಿವಿ ನೋಡುವಾಗ ಕೋಣೆಯಲ್ಲಿ ಲೈಟ್ ಆರಿಸಬಾರದು.
ಹೌದು, ಟಿವಿಯನ್ನು ಕತ್ತಲೆಯಲ್ಲಿ ನೋಡಲೇಬಾರದು. ಯಾಕೆಂದರೆ ಟಿವಿಯಿಂದ ಹೊರಬರುವ ಬೆಳಕಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅತಿನೇರಳೆ ಕಿರಣಗಳು ಇರುವುದರಿಂದ ಕಣ್ಣಿನಲ್ಲಿರುವ ರೆಟೀನಾಗೆ ಹಾನಿಯುಂಟು ಮಾಡುತ್ತದೆ.
ಕೋಣೆಯಲ್ಲಿ ಲೈಟ್ ಇದ್ದರೆ ಆ ಬೆಳಕಿನ ಕಿರಣಗಳ ಜೊತೆ ಅತಿನೇರಳೆ ಕಿರಣಗಳು ಒಂದಾಗಿ ಕಣ್ಣಿನ ಮೇಲೆ ಬೀಳುವುದಾಗಲಿ, ರೆಟೀನಾಗೆ ಹಾನಿ ಉಂಟು ಮಾಡುವಂತಹ ತೀವ್ರತೆ ಮಾಡುತ್ತದೆ. ಹಗಲಿನಲ್ಲಿ ಆದರೆ ಸೂರ್ಯನ ಕಿರಣಗಳು ಇದ್ದೇ ಇರುತ್ತದೆ.
ಟಿವಿಯನ್ನು ಕನಿಷ್ಠ ಐದು ಅಡಿಗಳ ದೂರದಿಂದ ನೋಡಬೇಕು. ಟಿವಿಯಲ್ಲಿ ಬೊಂಬೆಗಳು ಕಂಡುಬರುವ ತೆರೆಯ ಒಂದು ಮೂಲೆಯಿಂದ ಅದಕ್ಕೆ ಎದುರಿರುವ ಮೂಲೆ ಅಂದರೆ ಕರ್ಣದ ಹಿಂದೆ ಇರುವ ದೂರವನ್ನು ಆ ಟಿವಿ ಸೈಜ್ ಎಂದು ಗಣನೆಗೆ ತೆಗೆದುಕೊಳ್ಳುತ್ತಾರೆ. ಆ ಸೈಜನ್ನು 4 ರಿಂದ ಭಾಗಿಸಿದರೆ ಬರುವ ಸಂಖ್ಯೆ ನಮ್ಮ ಆ ಟಿವಿಯಿಂದ ಎಷ್ಟು ಅಡಿಗಳಷ್ಟು ದೂರದಲ್ಲಿ ಕೂರಬೇಕು ಎಂಬುದನ್ನು ತಿಳಿಸುತ್ತದೆ.
ಉದಾಹರಣೆಗೆ ಟಿವಿ ಸೈಜ್ 32 ಅಂಗುಲ ಇದ್ದರೆ ಆಗ 32/4=8. ಆದ್ದರಿಂದ ನಾವು ಆ ಟಿವಿಯಿಂದ ಕನಿಷ್ಠ 8 ಅಡಿಗಳಷ್ಟು ದೂರ ಕುಳಿತುಕೊಳ್ಳಬೇಕು.
ಇದಕ್ಕೆ ಜೊತೆಯಾಗಿ ಸ್ಕ್ರೀನ್ ನಮ್ಮ ಕಣ್ಣಿನ ದೃಷ್ಟಿ ಲೆವೆಲ್ಲಿಗೆ ಸರಿಯಾಗಿರಬೇಕು. ಟಿವಿ ವೀಕ್ಷಿಸಲು ಕತ್ತನ್ನು ಕೆಳಗೆ ಬಾಗಿಸುವುದಾದಲಿ, ಮೇಲೆತ್ತಿ ನೋಡುವಂತಾಗಲಿ ಆಗಬಾರದು. ಹಾಗಿದ್ದರೆ ಕತ್ತಿನ ನರಗಳ ಮೇಲೆ ಒತ್ತಡ ಉಂಟಾಗಿ ನರವು ಹಿಡಿಯುವ ಸಾಧ್ಯತೆಯಿದೆ. ಕಾಲಕ್ರಮೇಣ ಸ್ಪಾಂಡಿಲೈಟಿಸ್ ನಂತಹ ಕಾಯಿಲೆಗಳು ಉಂಟಾಗಬಹುದು.