alex Certify ನೀವೂ ʼಜಂಕ್ ಫುಡ್ʼ ತಿಂತೀರಾ……? ಹಾಗಾದ್ರೆ ಎಚ್ಚರ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ʼಜಂಕ್ ಫುಡ್ʼ ತಿಂತೀರಾ……? ಹಾಗಾದ್ರೆ ಎಚ್ಚರ……!

ಜಂಕ್ ಫುಡ್ ಪ್ರಿಯರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ಅದು-ಇದು ಕಾರಣಕ್ಕೆ ಎರಡು-ಮೂರು ದಿನಕ್ಕೆ ಜಂಕ್ ಫುಡ್ ತಿನ್ನೋರು ಎಚ್ಚರ. ಇದು ಚಯಾಪಚಯ ಸಮಸ್ಯೆ ಜೊತೆಗೆ ಮೊಣಕಾಲು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಆರೋಗ್ಯ ಸಂಬಂಧ ನಡೆದ ಹೊಸ ಅಧ್ಯಯನವೊಂದು ಈ ವಿಷಯವನ್ನು ತಿಳಿಸಿದೆ. ಅಧ್ಯಯನದ ವರದಿ ಪ್ರಕಾರ ಜಂಕ್ ಫುಡ್ ಸೇವನೆ ಮಾಡಿದ್ರೆ ಕೀಲು ನೋವು ಕಾಡುತ್ತದೆಯಂತೆ.

ಅಧ್ಯಯನದ ಪ್ರಕಾರ ಪಿಜ್ಜಾ, ಬರ್ಗರ್, ಚಿಪ್ಸ್, ಫ್ರೆಂಚ್ ಫ್ರೈಸ್ ಎಲ್ಲ ಜಂಕ್ ಫುಡ್ ಸಾಲಿಗೆ ಸೇರುತ್ತೆ. ಈ ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬಿದ್ದು, ಇದು ಸಂಧಿವಾತಕ್ಕೆ ಕಾರಣವಾಗುತ್ತದೆ.

ಇಲಿಗಳ ಮೇಲೆ ಈ ಪ್ರಯೋಗ ಮಾಡಲಾಗಿದ್ದು, ಜಂಕ್ ಫುಡ್ ತಿಂದ ಇಲಿಗಳ ತೂಕ ಹೆಚ್ಚಾಗಿದ್ದಲ್ಲದೆ ಲಿವರ್ ಗೆ ಸಂಬಂಧಿಸಿದ ಖಾಯಿಲೆಗಳು ಕಾಣಿಸಿಕೊಂಡಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...