ಉದ್ಯೋಗದ ನಿಮಿತ್ತವೋ ಅಥವಾ ನಮ್ಮದೇ ಸ್ವಂತ ಮನೆ ಕಟ್ಟದೇ ಇರುವುದಕ್ಕೆ ಆಗದೇ ಇರುವ ಕಾರಣದಿಂದಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತೇವೆ. ಈ ಬಾಡಿಗೆ ಮನೆಯಲ್ಲಿ ವಾಸ್ತು ಸರಿಯಾಗಿಲ್ಲದಿದ್ದರೆ ನಮ್ಮ ಆರೋಗ್ಯ ಹಾಗೂ ವೃತ್ತಿ ಜೀವನದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಆಗುತ್ತದೆ.
ಬಾಡಿಗೆ ಮನೆಯಲ್ಲಿ ಇರುವುದರಿಂದ ನಮಗೆ ಹೇಗೆ ಬೇಕೋ ಹಾಗೇ ಅದನ್ನು ಸರಿಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಅಲ್ಲಿರುವ ವಾಸ್ತು ದೋಷವನ್ನು ಸರಿ ಮಾಡಿಕೊಳ್ಳಬಹುದು.
ವಿಘ್ನವನ್ನು ನಿವಾರಿಸುವ ವಿನಾಯಕನ ಫೋಟೊವನ್ನು ಮನೆಯ ಮುಂಬಾಗಿಲಿನಲ್ಲಿ ಇಡಿ. ಇದರಿಂದ ಯಾವುದೇ ಬಗೆಯ ದೋಷಗಳು ಇದ್ದರೂ ವಿನಾಯಕನ ಅನುಗ್ರಹದಿಂದ ನಿವಾರಣೆಯಾಗುತ್ತದೆ.
ಹಾಗೇ ಹೂಗಳು ಕೂಡ ವಾಸ್ತು ದೋಷವನ್ನು ಪರಿಹರಿಸುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಮಲ್ಲಿಗೆ ಹೂವಿನ ಗಿಡವನ್ನು ನೆಡಿ. ಮನೆಯಲ್ಲಿ ಗಿಡ ನೆಡುವುದಕ್ಕೆ ಜಾಗವಿಲ್ಲದಿದ್ದರೆ ಪಾಟ್ ನಲ್ಲಾದರೂ ನೆಟ್ಟು ಬೆಳೆಸಿ. ಇದರಿಂದ ವಾಸ್ತು ದೋಷ ನಿವಾರಣೆಯಾಗಿ ನೆಮ್ಮದಿ ನೆಲೆಸುತ್ತದೆ.