ಕೆಲವರಿಗೆ ಬೆಳಿಗ್ಗೆ ತಿಂಡಿಗೆ ರೈಸ್ ಬಾತ್ ತಿಂದರೇನೆ ತೃಪ್ತಿ. ದಿನಾ ಒಂದೇ ರೀತಿ ರೈಸ್ ಬಾತ್ ತಿನ್ನುವುದಕ್ಕಿಂತ ಒಮ್ಮೆ ಈ ಬೆಳುಳ್ಳಿ ರೈಸ್ ಬಾತ್ ಮಾಡಿ ನೋಡಿ. ಆಮೇಲೆ ಪದೇ ಪದೇ ಇದನ್ನು ಮಾಡಿಕೊಂಡು ಸವಿಯುತ್ತಿರಿ.
ಬೇಕಾಗುವ ಸಾಮಗ್ರಿಗಳು:
2 ಕಪ್ ಅನ್ನ, 2 ಟೇಬಲ್ ಸ್ಪೂನ್ – ತೆಂಗಿನೆಣ್ಣೆ, 1 ಟೇಬಲ್ ಸ್ಪೂನ್ – ಕಾಳುಮೆಣಸಿನ ಪುಡಿ, 15 – 20 ಬೆಳ್ಳುಳ್ಳಿ ಎಸಳು, 10 ಎಸಳು – ಕರಿಬೇವು, 1 – ಒಣ ಮೆಣಸು, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಕಾಳುಮೆಣಸನ್ನು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಹಾಗೇ ಬೆಳುಳ್ಳಿಯನ್ನು ಸಿಪ್ಪೆ ತೆಗೆದು ಜಜ್ಜಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಬಿಸಿಯಾಗುತ್ತಲೇ ಬೆಳ್ಳುಳ್ಳಿ ಎಸಳು ಹಾಕಿ ಫ್ರೈ ಮಾಡಿ. ಇದು ಗರಿ ಗರಿಯಾಗುತ್ತಿದ್ದಂತೆ ಕರಿಬೇವಿನ ಎಸಳು ಹಾಕಿ ನಂತರ 1 ಒಣಮೆಣಸನ್ನು ಸೇರಿಸಿ ಎಲ್ಲವೂ ಚೆನ್ನಾಗಿ ಫ್ರೈ ಆದ ಮೇಲೆ ಕಾಳುಮೆಣಸಿನ ಪುಡಿ ಸೇರಿಸಿ ನಂತರ ಅನ್ನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಸಣ್ಣ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ ಸರ್ವ್ ಮಾಡಿ.