ಕೆಲವರು ಮೂತ್ರ ಪಿಂಡ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಮೊದಲನೇ ಹಂತದಲ್ಲಿ ಮೂತ್ರಪಿಂಡದ ಕಾರ್ಯಚಟುವಟಿಕೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬರುವುದಿಲ್ಲ. ಆದರೆ ಮೂತ್ರಪಿಂಡ ವೈಫಲ್ಯವನ್ನು ಸೂಚಿಸುವ ಕೆಲವು ಚಿಹ್ನೆಗಳ ಮೂಲಕ ಅದನ್ನು ತಿಳಿದುಕೊಳ್ಳಬಹುದು.
*ಸಾಯ್ನು ಸೆಳೆತ : ನೀವು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ದೇಹದೊಳಗೆ ಅಸಮತೋಲನ ಉಂಟಾಗಿ ಸ್ನಾಯು ಸೆಳೆತಕ್ಕೆ ಕಾರಣವಾಗುತ್ತದೆ.
*ಅರೆ ನಿದ್ರಾವಸ್ಥೆ : ಮೂತ್ರಪಿಂಡಗಳು ಕಾರ್ಯ ನಿರ್ವಹಿಸದೇ ಇದ್ದಾಗ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕುಸಿಯುತ್ತದೆ. ಇದರಿಂದ ದಣಿವು ಮತ್ತು ದುರ್ಬಲತೆಯನ್ನುಂಟು ಮಾಡುತ್ತದೆ. ಇದು ಅರೆನಿದ್ರಾವಸ್ಥೆಗೆ ಕಾರಣವಾಗುತ್ತದೆ.
*ಹಸಿವಿನ ಕೊರತೆ : ಮೂತ್ರಪಿಂಡದ ದುರ್ಬಲತೆ ಇರುವ ಕೆಲವರಿಗೆ ಹಠಾತ್ ಆಗಿ ಹಸಿವಾಗುವುದು ಕಡಿಮೆಯಾಗುತ್ತದೆ. ಕೆಲವರು ಕೆಟ್ಟ ಉಸಿರಾಟ ಸಮಸ್ಯೆಯನ್ನು ಅನುಭವಿಸುತ್ತಾರೆ.
*ವಾಕರಿಕೆ : ಮೂತ್ರಪಿಂಡದ ಸಮಸ್ಯೆ ಇರುವವರಿಗೆ ವಾಕರಿಕೆ ಸಮಸ್ಯೆ ಕಾಡುತ್ತದೆ. ಆಗಾಗ ವಾಂತಿ ಮಾಡಬೇಕು ಎಂದೆನಿಸುತ್ತದೆ.