ನೀವು ಯಾವ ವೇಗದಲ್ಲಿ ನಡೆಯುತ್ತೀರಿ ಎಂಬುದನ್ನು ಎಂದಾದ್ರೂ ಗಮನಿಸಿದ್ದೀರಾ…? ಉತ್ತರ ಇಲ್ಲ ಎಂದಾದ್ರೆ ಇಂದೇ ಗಮನ ನೀಡಿ. ನಿಮ್ಮ ನಡಿಗೆಯ ವೇಗಕ್ಕೂ ನಿಮ್ಮ ಆರೋಗ್ಯಕ್ಕೂ ಹತ್ತಿರದ ಸಂಬಂಧವಿದೆ. ನಿಮ್ಮ ಚಲನೆ ಹೃದಯ ಸಂಬಂಧಿ ಖಾಯಿಲೆಗಳಿಗೆ ಮೂಲವಾಗಲಿದೆ.
ನಿಮ್ಮ ನಡಿಗೆ ನಿಧಾನವಾಗಿದ್ದರೆ ಹೃದಯ ರೋಗ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಅಧ್ಯಯನವೊಂದು ಈ ವಿಷ್ಯವನ್ನು ಹೇಳಿದೆ. ವೇಗವಾಗಿ ನಡೆಯುವವರಿಗೆ ಹೋಲಿಸಿದ್ರೆ ನಿಧಾನವಾಗಿ ನಡೆಯುವವರಿಗೆ ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಳ್ಳುವುದು ಎರಡು ಪಟ್ಟು ಹೆಚ್ಚಂತೆ. ಮಹಿಳೆ ಹಾಗೂ ಪುರುಷರಿಬ್ಬರಿಗೂ ಇದು ಅನ್ವಯಿಸುತ್ತದೆ ಎಂದು ಅಧ್ಯಯನ ಹೇಳಿದೆ.
ನಿಧಾನ, ಮಧ್ಯಮ ಹಾಗೂ ವೇಗವಾಗಿ ಚಲಿಸುವಿಕೆ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ, ಭವಿಷ್ಯದಲ್ಲಿ ಹೃದಯ ಸಂಬಂಧಿ ಖಾಯಿಲೆ ಅಥವಾ ಕ್ಯಾನ್ಸರ್ ಗೆ ಇದು ಕಾರಣವಾಗುತ್ತಾ ಎನ್ನುವ ಬಗ್ಗೆ ಸಂಶೋಧನೆ ನಡೆಸಲಾಗಿತ್ತಂತೆ.