ದೇಹ ತೂಕ ಇಳಿಸಲು ನಿತ್ಯ ಜಾಗಿಂಗ್ ಮಾಡುವುದು ಒಳ್ಳೆಯದು ಎಂದು ಹೇಳುವುದನ್ನು ನೀವು ಕೇಳಿರಬಹುದು. ನಿಜಕ್ಕೂ ಜಾಗಿಂಗ್ ಮಾಡಿದರೆ ದೇಹ ತೂಕ ಇಳಿಯುತ್ತದೆಯೇ?
ಓಡುವುದು ದೈಹಿಕ ಚಟುವಟಿಕೆಗಳಲ್ಲಿ ಅತ್ಯುತ್ತಮವಾದುದು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಓಡುವುದು ಹೆಚ್ಚಾದರೂ ಸಮಸ್ಯೆಯೇ. ಇದು ಹೃದಯದ ರಕ್ತನಾಳಗಳಿಗೆ ಅತ್ಯುತ್ತಮ ವ್ಯಾಯಾಮ ನೀಡುತ್ತದೆ. ಆದರೆ ಪ್ರತಿದಿನ ಓಡುವುದರಿಂದ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಇದು ಭವಿಷ್ಯದಲ್ಲಿ ಕಾಲು ನೋವಿಗೆ ಕಾರಣವಾಗಬಹುದು.
ಕುಡಿದು ನೋಡಿ ಏಲಕ್ಕಿ ಚಹಾ
ನಿತ್ಯ ಓಡುವ ಬದಲು ವಾಕಿಂಗ್ ವ್ಯಾಯಾಮ ಗಳಂತಹ ಚಟುವಟಿಕೆಗಳಲ್ಲಿ ದೇಹದಂಡನೆ ಮಾಡಬಹುದು. ದೇಹಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ವಿಶ್ರಾಂತಿಯು ಅಷ್ಟೇ ಮುಖ್ಯ ಎಂಬುದು ನಿಮಗೆ ನೆನಪಿರಲಿ. ನಿರಂತರ ಓಟದಿಂದ ಬೆನ್ನು ಭುಜ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಓಟದ ಅವಧಿಯನ್ನು ಕಡಿಮೆ ಮಾಡಿ ಯೋಗ, ಧ್ಯಾನ ಗಳಲ್ಲಿ ಹೆಚ್ಚಿನ ಸಮಯ ಕಳೆಯುವುದು ಒಳ್ಳೆಯದು.