ಮನೆಯಲ್ಲಿ ಹಣವಿರಬೇಕು ಎಂದು ಎಲ್ಲಾ ಬಯಸುತ್ತಾರೆ. ಆದರೆ ಈ ಹಣ ಇನ್ನಿತರ ಕಾರಣಗಳಿಗೆ ಖರ್ಚಾಗಿ ಹೋಗುತ್ತದೆ. ಇದರಿಂದ ತುಂಬಾ ಬೇಸರವಾಗುತ್ತದೆ. ಹಾಗಾಗಿ ಕೈಗೆ ಹಣ ಸಿಕ್ಕ ತಕ್ಷಣ ಈ ಕೆಲಸ ತಪ್ಪದೇ ಮಾಡಿ.
ಎಲ್ಲಾ ಪುರುಷರಿಗೂ ಅವರ ಪತ್ನಿಯೇ ಅದೃಷ್ಟ ಲಕ್ಷ್ಮೀಯಾಗಿರುತ್ತಾಳೆ. ಹಾಗಾಗಿ ಮಡದಿಯನ್ನು ಗೌರವದಿಂದ, ಸಂತೋಷದಿಂದ ಇಟ್ಟುಕೊಂಡರೆ ಲಕ್ಷ್ಮೀಯ ಅನುಗ್ರಹವಾಗಿ ಹಣ ಕೈತಪ್ಪಿ ಹೋಗುವುದಿಲ್ಲ. ಅಲ್ಲದೇ ನೀವು ಸಂಪಾದನೆ ಮಾಡಿದ ಹಣವನ್ನು ಪತ್ನಿಯ ಕೈಗೆ ಕೊಟ್ಟು ಲಕ್ಷ್ಮೀ ದೇವಿಯ ಮುಂದೆ ಇಟ್ಟು ಪೂಜಿಸಿದರೆ ನಿಮ್ಮ ಹಣ ವೃದ್ಧಿಯಾಗುತ್ತದೆ.
ಹಾಗೇ ಅಮಾವಾಸ್ಯೆಯಂದು ಕಪ್ಪು ಮಣ್ಣಿನ ಮಡಿಕೆಯಲ್ಲಿ ನೀರು ಮತ್ತು ಉಪ್ಪನ್ನು ಹಾಕಿ ದೇವರ ಮುಂದೆ ಇಡಿ. 3 ದಿನಗಳ ಬಳಿಕ ನಿರ್ಜನ ಪ್ರದೇಶದಲ್ಲಿ ಅದನ್ನು ಹಾಕಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಸಂಪತ್ತು ತುಂಬಿರುತ್ತದೆ ಎನ್ನಲಾಗಿದೆ.