alex Certify ನೀವು ದೀರ್ಘಾಯಷಿಗಳಾಗಬೇಕಾ…..? ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ದೀರ್ಘಾಯಷಿಗಳಾಗಬೇಕಾ…..? ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರ

ಪ್ರತಿಯೊಬ್ಬರೂ ದೀರ್ಘ ಮತ್ತು ಸಂತೋಷದ ಜೀವನವನ್ನು ಬಯಸುತ್ತಾರೆ. ಆದರೆ ಆಯುಷ್ಯವನ್ನು ಹೆಚ್ಚಿಸುವುದು ನಮ್ಮ ಕೈಯಲ್ಲಿಯೇ ಇದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಉತ್ತಮ ಜೀವನಶೈಲಿ ಮತ್ತು ಆಹಾರದ ಮೂಲಕ ಆಯಸ್ಸು ಹೆಚ್ಚಿಸಿಕೊಳ್ಳಬಹುದು. ಯಾಕಂದ್ರೆ ಒಳ್ಳೆಯ ಆಹಾರ ಸೇವನೆಯಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

ಕೆಲವೊಂದು ಆಹಾರ ಪದಾರ್ಥಗಳು ನಮ್ಮ ಆಯುಷ್ಯವನ್ನೇ ಕಡಿಮೆ ಮಾಡುತ್ತವೆ. ಮಿಚಿಗನ್ ವಿಶ್ವವಿದ್ಯಾಲಯದ ತಜ್ಞರು ಸುಮಾರು 6 ಬಗೆಯ ಆಹಾರ ಪದಾರ್ಥಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಕೆಲವು ಪದಾರ್ಥಗಳನ್ನು ತಿನ್ನುವುದರಿಂದ ಜನರ ಆಯಸ್ಸು ಹೆಚ್ಚುತ್ತದೆ ಎಂಬುದು ಈ ಅಧ್ಯಯನದಲ್ಲಿ ದೃಢಪಟ್ಟಿದೆ. ಯಾವ್ಯಾವ ಆಹಾರಗಳಿಂದ ಆಯಸ್ಸಿಗೆ ಹೊಡೆತ ಬೀಳುತ್ತದೆ ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.

ಸಂಶೋಧಕರ ಪ್ರಕಾರ ಸಂಸ್ಕರಿಸಿದ ಮಾಂಸ (ಬೆಕಾನ್) ನಮ್ಮ ಜೀವಿತಾವಧಿಯನ್ನು 26 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಪಿಜ್ಜಾವನ್ನು ಸೇವಿಸುವುದರಿಂದ ನಮ್ಮ ಜೀವಿತಾವಧಿ 7.8 ನಿಮಿಷಗಳಷ್ಟು ಕಡಿಮೆಯಾಗುತ್ತದೆ. ಅದೇ ರೀತಿ ತಂಪು ಪಾನೀಯ ಸೇವನೆಯಿಂದ 12.4 ನಿಮಿಷಗಳು,  ಹಾಟ್ ಡಾಗ್‌ಗಳನ್ನು ತಿಂದರೆ 36 ನಿಮಿಷಗಳು ಮತ್ತು ಚೀಸ್ ಬರ್ಗರ್‌ ತಿನ್ನುವುದರಿಂದ 8.8 ನಿಮಿಷಗಳಷ್ಟು ಆಯುಷ್ಯ ಕಡಿಮೆಯಾಗುತ್ತದೆ.

ಕೆಲವೊಂದು ನಿರ್ದಿಷ್ಟ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದ್ರೆ ನಮ್ಮ ಆಯುಷ್ಯ ಹೆಚ್ಚಾಗುತ್ತದೆ. ಉದಾಹರಣೆಗೆ ಪೀನಟ್‌ ಬಟರ್‌ ಮತ್ತು ಜಾಮ್ ಸ್ಯಾಂಡ್ವಿಚ್ ತಿನ್ನುವುದರಿಂದ 33.1 ನಿಮಿಷಗಳಷ್ಟು ಜೀವಿತಾವಧಿ ಹೆಚ್ಚಾಗುತ್ತದೆ. ಬೇಯಿಸಿದ ಸಾಲ್ಮನ್ ಮೀನುಗಳನ್ನು ತಿನ್ನುವುದರಿಂದ 13.5 ನಿಮಿಷಗಳ ಜೀವಿತಾವಧಿ ಹೆಚ್ಚಾಗುತ್ತದೆ. ಟೊಮೆಟೊ ಸೇವನೆಯಿಂದ 3.8 ನಿಮಿಷಗಳು ಮತ್ತು ಅವಕಾಡೊ ಸೇವನೆಯಿಂದ 1.5 ನಿಮಿಷಗಳಷ್ಟು ಆಯಸ್ಸು ಹೆಚ್ಚಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...