ಗರ್ಭಧಾರಣೆಯ ಮೊದಲ ಎರಡು ವಾರ ಗೊಂದಲಗಳಿರುತ್ತವೆ. ಗರ್ಭಿಣಿ ಹೌದಾ? ಇಲ್ವಾ ಎಂಬುದನ್ನು ಪರೀಕ್ಷೆ ಮಾಡಲು ಮಾರುಕಟ್ಟೆಯಲ್ಲಿ ಕೆಲ ಸಾಧನಗಳು ಲಭ್ಯವಿದೆ. ಇದ್ರ ಹೊರತಾಗಿಯೂ ಅನೇಕರು ಮನೆಯಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಲು ಬಯಸ್ತಾರೆ.
ಗರ್ಭಧಾರಣೆ ಪರೀಕ್ಷೆ ಕಿಟ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಸಮಯದಲ್ಲಿ ಮಹಿಳೆಯರು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡೆ ಗರ್ಭಧಾರಣೆ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಮನೆಯಲ್ಲೇ ಗರ್ಭಧಾರಣೆ ಪರೀಕ್ಷೆ ಮಾಡಿಕೊಳ್ಳುವ ಸುಲಭ ಮಾರ್ಗಗಳು ಇಲ್ಲಿವೆ. ಆದ್ರೆ ಅವಶ್ಯವೆನಿಸಿದ್ರೆ ವೈದ್ಯರ ಬಳಿ ತೆರಳುವುದು ಸೂಕ್ತ.
ನಿಮ್ಮ ಮೂತ್ರವನ್ನು ಒಂದು ಗ್ಲಾಸ್ ಗೆ ಹಾಕಿ ಅದಕ್ಕೆ ಟೂತ್ ಪೇಸ್ಟ್ ಬೆರೆಸಿ. ಸ್ವಲ್ಪ ಸಮಯದ ನಂತ್ರ ಈ ಮಿಶ್ರಣದಲ್ಲಿ ನೊರೆ ಕಾಣಿಸಿಕೊಂಡರೆ ಮತ್ತು ಮಿಶ್ರಣ ನೀಲಿ ಬಣ್ಣಕ್ಕೆ ತಿರುಗಿದ್ರೆ ಗರ್ಭಿಣಿ ಎಂದರ್ಥ.
ಒಂದು ಪಾತ್ರೆಯಲ್ಲಿ ವಿನೆಗರ್ ಜೊತೆ ಮೂತ್ರ ಬೆರೆಸಿ. ಸ್ವಲ್ಪ ಸಮಯದ ನಂತರ ವಿನೆಗರ್ ಬಣ್ಣವು ಬದಲಾಗಲು ಪ್ರಾರಂಭಿಸಿದರೆ ಪರೀಕ್ಷೆಯು ಸಕಾರಾತ್ಮಕವಾಗಿದೆ ಎಂದರ್ಥ.
ಒಂದು ಪಾತ್ರೆಯಲ್ಲಿ ಸಕ್ಕರೆ ಹಾಕಿ ಬೆಳಗಿನ ಮೊದಲ ಮೂತ್ರವನ್ನು ಅದಕ್ಕೆ ಹಾಕಿ. ಸಕ್ಕರೆ ಕರಗುವ ಬದಲು ಹೆಪ್ಪುಗಟ್ಟಿದ್ರೆ ನೀವು ತಾಯಿಯಾಗ್ತಿದ್ದೀರಿ ಎಂದರ್ಥ.
ಮೂತ್ರಕ್ಕೆ ಸೋಪ್ ಬೆರೆಸಿ. ಈ ಮಿಶ್ರಣದಲ್ಲಿ ಗುಳ್ಳೆಗಳು ಕಾಣಿಸಿಕೊಂಡರೆ ನೀವು ಗರ್ಭಧರಿಸಿದ್ದೀರಿ ಎಂದರ್ಥ.