ಕಡಲೆಕಾಯಿ ಬಡವರ ಬಾದಾಮಿಯೆಂದೇ ಪ್ರಸಿದ್ಧಿ. ಕಡಲೆಕಾಯಿಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಕಡಲೆಕಾಯಿಯ ಪರಿಣಾಮ ಬಿಸಿಯಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಸೇವಿಸುತ್ತಾರೆ.
ಆದರೆ ಕಡಲೆಕಾಯಿಯನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಅನೇಕ ರೀತಿಯ ತೊಂದರೆಗಳಾಗುತ್ತವೆ. ಕೆಲವು ನಿರ್ದಿಷ್ಟ ಸಮಸ್ಯೆಗಳಿರುವವರು ಕಡಲೆಕಾಯಿಯನ್ನು ತಿನ್ನಲೇಬಾರದು. ಮಲಬದ್ಧತೆ, ತೂಕ ಹೆಚ್ಚಾಗುವುದು ಹೀಗೆ ಅನೇಕ ಸಮಸ್ಯೆಗಳು ಶೇಂಗಾ ಸೇವನೆಯಿಂದಾಗುತ್ತವೆ.
ಈಗಾಗ್ಲೇ ನಿಮ್ಮ ತೂಕವು ತುಂಬಾ ಹೆಚ್ಚಿದ್ದರೆ ಕಡಲೆಕಾಯಿಯನ್ನು ತಿನ್ನಬೇಡಿ. ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಕ್ಯಾಲೊರಿಯನ್ನು ಹೊಂದಿರುತ್ತದೆ. ಇದರಿಂದಾಗಿ ನಿಮ್ಮ ತೂಕವು ತುಂಬಾ ವೇಗವಾಗಿ ಹೆಚ್ಚಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರು ಕಡಲೆಕಾಯಿಯನ್ನು ತಿನ್ನುವುದನ್ನು ತ್ಯಜಿಸಬೇಕು. ಅಂತಹವರಿಗೆ ಕಡಲೆಕಾಯಿ ತಿಂದರೆ ಹೊಟ್ಟೆ ಉಬ್ಬರಿಸುತ್ತದೆ.
ಅತಿಯಾಗಿ ಕಡಲೆಕಾಯಿಯನ್ನು ಸೇವಿಸಿದರೆ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಾಗುತ್ತವೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಕಡಲೆಕಾಯಿಯಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಾಗುತ್ತಿದೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹೆಚ್ಚು ಕಡಲೆಕಾಯಿಯನ್ನು ತಿನ್ನುವುದರಿಂದ ಯಕೃತ್ತಿನ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ಯಕೃತ್ತು ದುರ್ಬಲವಾಗಿರುವ ಜನರು ಯಾವಾಗಲೂ ಕಡಲೆಕಾಯಿ ತಿನ್ನುವುದನ್ನು ತಪ್ಪಿಸಬೇಕು.
ಕಡಲೆಕಾಯಿಯನ್ನು ಅತಿಯಾಗಿ ಸೇವಿಸಿದರೆ ಚರ್ಮದ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ. ದೇಹದಲ್ಲಿ ಊತ, ಕೆಂಪಗಾಗುವುದು, ತುರಿಕೆ ಅಥವಾ ದದ್ದು ಬರುವ ಸಾಧ್ಯತೆ ಇರುತ್ತದೆ. ಹಾಗೇನಾದರೂ ಆದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.