ಜ್ಯೋತಿಷ್ಯದಲ್ಲಿ ವ್ಯಕ್ತಿಯ ಸ್ವಭಾವವನ್ನು ತಿಳಿಸುವ ಅನೇಕ ಮಾರ್ಗಗಳಿವೆ. ವ್ಯಕ್ತಿಯ ರಾಶಿ, ಜನ್ಮ ದಿನಾಂಕ, ಹಸ್ತರೇಖೆ ಸೇರಿದಂತೆ ಅನೇಕ ವಿಧಾನಗಳಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದು. ಹಣ್ಣುಗಳ ಮೂಲಕವೂ ನಿಮ್ಮ ಸ್ವಭಾವವನ್ನು ತಿಳಿಯಬಹುದು. ನಿಮಗೆ ಯಾವ ಹಣ್ಣು ಇಷ್ಟ ಎಂಬ ಆಧಾರದ ಮೇಲೆ ನಿಮ್ಮ ಸ್ವಭಾವವನ್ನು ಹೇಳಬಹುದು.
ಮಾವಿನ ಹಣ್ಣು : ನೀವು ಮಾವಿನ ಹಣ್ಣಿನ ಪ್ರೇಮಿಗಳಾಗಿದ್ದರೆ, ನೀವು ಯಾವುದ್ರಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಿಯ ವ್ಯಕ್ತಿ ಅಥವಾ ವಸ್ತು ಪಡೆಯಲು ನೀವು ಯಾವ ಮಟ್ಟಕ್ಕೆ ಇಳಿಯಲೂ ಸಿದ್ಧರಿರುತ್ತೀರಿ. ಇವರು ಒಳ್ಳೆಯ ಜೀವನ ಸಂಗಾತಿ ಎಂಬುದನ್ನು ಸಾಬೀತುಪಡಿಸುತ್ತಾರೆ.
ಬಾಳೆ ಹಣ್ಣು : ಬಾಳೆ ಹಣ್ಣು ಅಗ್ಗವಾಗಿದ್ದು, ಹೆಚ್ಚಿನ ಪೌಷ್ಠಿಕಾಂಶದಿಂದ ಕೂಡಿದೆ. ಅನೇಕ ಜನರು ಇದನ್ನು ಇಷ್ಟಪಡ್ತಾರೆ. ಬಾಳೆ ಹಣ್ಣನ್ನು ಇಷ್ಟಪಡುವ ಜನರು ಹೆಚ್ಚು ಭಾವುಕರಾಗಿರುತ್ತಾರೆ. ತಲೆಗೆ ಮಹತ್ವ ನೀಡುವ ಬದಲು ಮನಸ್ಸಿನ ಮಾತಿಗೆ ಬೆಲೆ ನೀಡುವುದ್ರಿಂದ ಹೆಚ್ಚು ನಷ್ಟ ಅನುಭವಿಸುತ್ತಾರೆ.
ಸೇಬು : ಸೇಬು ಹಣ್ಣನ್ನು ಹೆಚ್ಚು ಪ್ರೀತಿಸುವ ಜನರಿಗೆ ಕೋಪ ಶೀಘ್ರವಾಗಿ ಬರುತ್ತದೆ. ಆದ್ರೆ ಒಳ್ಳೆ ನಾಯಕತ್ವದ ಸ್ವಭಾವ ಹೊಂದಿರುತ್ತಾರೆ. ಬಹಳ ಹಠಮಾರಿಯಾಗಿರುವ ಜನರು ತಮಗೆ ಬೇಕಾದದ್ದನ್ನು ಸಾಧಿಸದೆ ಬಿಡುವುದಿಲ್ಲ. ನೇರವಾಗಿರುವ ಜನರು ವಿಶ್ವಾಸಾರ್ಹರಾಗಿರುತ್ತಾರೆ.
ಕಿತ್ತಳೆ : ಕಿತ್ತಳೆ ಹಣ್ಣನ್ನು ಹೆಚ್ಚು ಇಷ್ಟಪಡುವ ಜನರು ನಾಚಿಕೆ ಮತ್ತು ತಾಳ್ಮೆ ಹೊಂದಿರುತ್ತಾರೆ. ಸೃಜನಶೀಲ ಕ್ಷೇತ್ರದಲ್ಲಿ ಯಶಸ್ಸು ಪಡೆಯುತ್ತಾರೆ.
ಚೆರ್ರಿ : ಈ ಹಣ್ಣನ್ನು ಇಷ್ಟಪಡುವ ಜನರ ವೃತ್ತಿ ಜೀವನದಲ್ಲಿ ಏರಿಳಿತವಿದ್ದರೂ ಅವರು ಹೆಚ್ಚು ಗೌರವ ಸಂಪಾದಿಸುತ್ತಾರೆ. ಸರಳ ಜೀವನ ಸಾಗಿಸುವ ಜನರು ಇತರರಿಗೆ ನೆರವಾಗುತ್ತಾರೆ.
ಅನಾನಸ್ : ಈ ಹಣ್ಣನ್ನು ಇಷ್ಟಪಡುವ ಜನರು ನಿರ್ವಹಣಾ ಸಾಮರ್ಥ್ಯ ಹೊಂದಿರುತ್ತಾರೆ. ಕೆಲಸವನ್ನು ಸರಳವಾಗಿ ಹಾಗೂ ತ್ವರಿತವಾಗಿ ಮಾಡ್ತಾರೆ.