alex Certify ನೀವು ಅತಿ ಬೇಗ ಸುಸ್ತಾಗ್ತೀರಾ…? ಹಾಗಿದ್ರೆ ಇದ್ರ ಸೇವನೆ ಶುರು ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಅತಿ ಬೇಗ ಸುಸ್ತಾಗ್ತೀರಾ…? ಹಾಗಿದ್ರೆ ಇದ್ರ ಸೇವನೆ ಶುರು ಮಾಡಿ

ವಾಕಿಂಗ್ ಮಾಡುವಾಗ, ಮೆಟ್ಟಿಲು ಏರುವಾಗ, ಓಡುವಾಗ ಅತಿ ಬೇಗ ಸುಸ್ತಾಗುತ್ತಾ? ಇದು ಅನಾರೋಗ್ಯದ ಸಂಕೇತ. ನಿಮ್ಮ ದೇಹದಲ್ಲಿ ಶಕ್ತಿ ಕಡಿಮೆಯಾಗ್ತಿದೆ ಎಂದರ್ಥ. ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಆಹಾರ ಪದ್ಧತಿಯನ್ನು ಬದಲಿಸಿ ಕೆಲ ಆಹಾರವನ್ನು ಅಗತ್ಯವಾಗಿ ಸೇವಿಸಿ.

ಬಾಳೆಹಣ್ಣು: ಶಕ್ತಿಯನ್ನು ಹೆಚ್ಚಿಸುವ  ಹಣ್ಣು. ಮೊದಲ ಬಾರಿ ಓಡಲು ಶುರು ಮಾಡಿದ್ದರೆ ಅಗತ್ಯವಾಗಿ ಬಾಳೆ ಹಣ್ಣು ಸೇವನೆ ಶುರು ಮಾಡಿ. ಬಾಳೆಹಣ್ಣು ತಿನ್ನುವುದರಿಂದ ದೇಹದ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಬಿ 6 ಇದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ.

ಮೀನು: ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಮೀನು ಮನಸ್ಸು ಮತ್ತು ದೇಹ ಎರಡಕ್ಕೂ ಆರೋಗ್ಯಕರ ಆಹಾರವಾಗಿದೆ. ಪ್ರೊಟೀನ್ ಮತ್ತು ವಿಟಮಿನ್-ಡಿ ಕೊರತೆಯನ್ನು ಕಡಿಮೆ ಮಾಡುತ್ತದೆ. ಮೀನಿನ ಸೇವನೆಯಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

ಬ್ರೌನ್ ರೈಸ್: ಹೆಚ್ಚಿನ ಜನರು ಬಿಳಿ ಅಕ್ಕಿ ತಿನ್ನುತ್ತಾರೆ. ಇದ್ರಿಂದ ಶಕ್ತಿಯ ಮಟ್ಟ ಹೆಚ್ಚುವುದಿಲ್ಲ. ಶಕ್ತಿ ಹೆಚ್ಚಿಸಿ, ತೂಕ ಕಡಿಮೆ ಮಾಡಬೇಕಾದ್ರೆ ಕಂದು ಅನ್ನವನ್ನು ಸೇವಿಸಿ. ಬ್ರೌನ್ ರೈಸ್‌ನಲ್ಲಿ ಫೈಬರ್ ಮತ್ತು ವಿಟಮಿನ್ ಬಿ ಹೆಚ್ಚಿರುತ್ತದೆ.

ಬಾದಾಮಿ: ಬೇಗನೆ ದಣಿಯುತ್ತಿದ್ದರೆ ದೇಹದಲ್ಲಿ ಶಕ್ತಿಯ ಕೊರತೆಯಿದೆ ಎಂದರ್ಥ. ಬಾದಾಮಿ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬಾದಾಮಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಸಿಟ್ರಸ್ ಹಣ್ಣುಗಳು: ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿರಿ. ಶೀತ ಮತ್ತು ಕೆಮ್ಮಿನ ಸಮಯದಲ್ಲಿ ದೇಹದ ಶಕ್ತಿಯ ಮಟ್ಟ ಇಳಿಯುತ್ತದೆ. ವಿಟಮಿನ್-ಸಿ ಸಮೃದ್ಧ ಹಣ್ಣುಗಳು ದೇಹದಲ್ಲಿ ಇರುವ ಸೂಕ್ಷ್ಮಜೀವಿಗಳನ್ನು ಸಾಯಿಸುತ್ತದೆ.

ವಿಟಮಿನ್-ಸಿ ಸಮೃದ್ಧ ಹಣ್ಣುಗಳು ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕಿತ್ತಳೆ, ಕಿವಿ, ನಿಂಬೆ, ಟೊಮೆಟೊ ಇತ್ಯಾದಿಗಳನ್ನು ಹೆಚ್ಚು ಸೇವಿಸಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...