ಮನುಷ್ಯನ ಮಾನಸಿಕ ಒತ್ತಡ ಅವನ ಜೊತೆಗಿರುವ ಸಾಕುನಾಯಿ ಮೇಲೂ ಪರಿಣಾಮ ಬೀರುತ್ತದೆ ಎಂಬುದಾಗಿ ಅಧ್ಯಯನವೊಂದು ಹೇಳಿದೆ.
ಸ್ವೀಡನ್ನ ಲಿಂಕೋಪಿಂಗ್ ಯುನಿವರ್ಸಿಟಿಯ ಲೀನಾ ರೋಥ್ ಅವರ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ. ಒತ್ತಡದಲ್ಲಿರುವವರ ಕೇಶದಲ್ಲಿನ ಕಾರ್ಟಿಸೋಲ್ ಹಾಗೂ ಅವರ ನಾಯಿಯ ಕೂದಲಿನಲ್ಲಿನ ಕಾರ್ಟಿಸೋಲ್ ಪ್ರಮಾಣಕ್ಕೆ ಸಾಮ್ಯತೆ ಇರುತ್ತದೆ. ವ್ಯಕ್ತಿ ಒತ್ತಡದಿಂದ ಡಲ್ ಆಗಿದ್ದರೆ ಅವರ ನಾಯಿಯೂ ಡಲ್ ಆಗಿರುತ್ತದೆ ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಶೆಟ್ಲ್ಯಾಂಡ್ ಶೀಪ್ಡಾಗ್ ಹೊಂದಿರುವ 58 ಮಂದಿಯನ್ನು ಅವರು ಅಧ್ಯಯನಕ್ಕೊಳಪಡಿಸಿದ್ದಾರೆ. ಅಲ್ಲದೆ ನಾಯಿಯೊಂದಿಗೆ ನೀವು ಸಂತೋಷದಿಂದಿರಿ ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.