ಕೂದಲುಗಳ ಮಧ್ಯೆ ಬಿರುಕು ಉಂಟಾದಾಗ ಕೂದಲು ಬೆಳೆಯುವುದಿಲ್ಲ. ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಕೂದಲ ಬೆಳವಣಿಗೆ ಮಾಡಿಕೊಳ್ಳುವುದು ಹೇಗೆಂದು ನೋಡೋಣ…..
ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ ತೆಗೆದು ಚಿಕ್ಕ ತುಂಡುಗಳಾಗಿ ಮಾಡಿ. ಅಲೋವೆರಾದಲ್ಲಿ ವಿಟಮಿನ್ ಇ ಇದ್ದು, ಉದ್ದ ಮತ್ತು ದಟ್ಟವಾಗಿ ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಹಾನಿಯಾದ ಕೂದಲನ್ನು ಪೋಷಿಸುತ್ತದೆ. ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೇರಳವಾಗಿದೆ. ಕೂದಲು ಬೆಳೆಯಲು ಇದು ಸಹಾಯ ಮಾಡುತ್ತದೆ.
ಜೊತೆಗೆ ಆಲೂಗಡ್ಡೆ ಸೇರಿಸಿ ಚೆನ್ನಾಗಿ ರುಬ್ಬಿ. ಈ ಮಿಶ್ರಣವನ್ನು ವಾರದಲ್ಲಿ ಮೂರು ಬಾರಿ ಮಾಡಿ. ಸ್ನಾನ ಮಾಡುವ ಮುಂಚೆ ಈ ಮಿಶ್ರಣವನ್ನು ಚೆನ್ನಾಗಿ ತಲೆಯ ಬುಡದ ಕೆಳಗೆ ಹಚ್ಚಬೇಕು. ಸ್ವಲ್ಪ ಹೊತ್ತು ಹಾಗೇ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.