ಇಂಟರ್ನೆಟ್ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆಯೇ ಆನ್ಲೈನ್ ವಂಚಕರ ಸಂಖ್ಯೆಯೂ ಗಣನೀಯ ವೇಗದಲ್ಲಿ ಬೆಳೆಯುತ್ತಿದೆ. ಇದೀಗ ಹಳೆಯ ಆನ್ಲೈನ್ ವಂಚನೆಯ ವಿಧಾನವು ಮತ್ತೆ ಚಾಲ್ತಿಗೆ ಬಂದಿದೆ. ಆನ್ಲೈನ್ನಲ್ಲಿ ಪಾರ್ನ್ ವಿಡಿಯೋಗಳನ್ನು ನೋಡುವವರೇ ಇಂತಹ ವಂಚಕರಿಗೆ ಟಾರ್ಗೆಟ್. ಇತ್ತೀಚಿನ ವರದಿಗಳ ಪ್ರಕಾರ ಜನರಿಗೆ ಪಾರ್ನ್ ಸೈಟ್ಗಳ ವಿಚಾರದಲ್ಲಿ ನಕಲಿ ಪಾಪ್ ಅಪ್ ಸಂದೇಶ ಕಾಣಿಸುತ್ತಿದೆ. ಇಲ್ಲಿ ಬಳಕೆದಾರರಿಗೆ ನಿಮಗೆ ಪಾರ್ನ್ ವಿಡಿಯೋಗಳನ್ನು ವೀಕ್ಷಿಸಲು ಆಗದಂತೆ ಲಾಕ್ ಆಗಿದೆ ಎಂದು ಎಚ್ಚರಿಕೆ ನೀಡಲಾಗುತ್ತದೆ. ಭದ್ರತಾ ಸಂಶೋಧಕರು ಈ ಬಗ್ಗೆ ಜನರನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ನೀವು ಪಾರ್ನೋಗ್ರಫಿಯನ್ನು ವೀಕ್ಷಿಸುತ್ತಿರುವುದರಿಂದ ನಿಮಗೆ ಬ್ರೌಸರ್ ಲಾಕ್ ಆಗಿದೆ ಎಂದು ಸೈಬರ್ ವಂಚಕರು ಸಂದೇಶವನ್ನು ಕಳುಹಿಸುತ್ತಾರೆ. ಈ ಬ್ರೌಸರ್ನ್ನು ಅನ್ಲಾಕ್ ಮಾಡಲು ನೀವು ಹಣವನ್ನು ನೀಡಬೇಕು ಎಂದು ಹೇಳಲಾಗುತ್ತದೆ.
ನಿಮ್ಮ ಕಂಪ್ಯೂಟರ್ನ್ನು ಅನ್ಲಾಕ್ ಮಾಡಲು ನೀವು 29 ಸಾವಿರ ರೂಪಾಯಿ ದಂಡ ಪಾವತಿ ಮಾಡಬೇಕು ಎಂದು ಹೇಳಲಾಗುತ್ತದೆ. ನೀವು ಈ ಕೂಡಲೇ ಹಣ ಪಾವತಿ ಮಾಡದೇ ಹೋದಲ್ಲಿ ಈ ಪ್ರಕರಣವು ಅಪರಾಧದ ಅಡಿಯಲ್ಲಿ ಬರುತ್ತದೆ. ಹೀಗಾಗಿ ನೀವು 6 ಗಂಟೆಗಳ ಒಳಗಾಗಿ ದಂಡ ಪಾವತಿ ಮಾಡಲೇಬೇಕು ಎಂದು ಎಚ್ಚರಿಕೆ ನೀಡಲಾಗುತ್ತದೆ.
ಅಲ್ಲದೇ ಈ ಸಂದೇಶದ ಜೊತೆಯಲ್ಲಿ ಪೇಮೆಂಟ್ ಕುರಿತಂತೆಯೂ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಇಲ್ಲಿ ವೀಸಾ ಇಲ್ಲವೇ ಮಾಸ್ಟರ್ ಕಾರ್ಡ್ಗಳನ್ನು ಬಳಕೆ ಮಾಡಿ ನೀವು ಪೇಮೆಂಟ್ ಮಾಡಬಹುದು ಎಂದು ಹೇಳಲಾಗುತ್ತದೆ. ನೀವು ಹಣ ಪಾವತಿ ಮಾಡಿದಲ್ಲಿ ಬ್ರೌಸರ್ ಅನ್ಲಾಕ್ ಆಗುತ್ತೆ ಎಂದು ಹೇಳಲಾಗುತ್ತದೆ.
ಇಲ್ಲಿ ಕೇಂದ್ರ ಸಚಿವಾಲಯ ಹೆಸರನ್ನು ಬಳಕೆ ಮಾಡಿಕೊಂಡು ಸಂಪೂರ್ಣವಾಗಿ ವಂಚನೆ ನಡೆಸಲಾಗುತ್ತಿದೆ. ಪಾರ್ನೋಗ್ರಫಿಗಳ ವೀಕ್ಷಣೆಗೆ ದೇಶದಲ್ಲಿ ನಿರ್ಬಂಧ ಇದ್ದರೂ ಸಹ ಕೇಂದ್ರ ಐಟಿ ಸಚಿವಾಲಯವು ಯಾರ ಕಂಪ್ಯೂಟರ್ಗಳನ್ನು ಟ್ರ್ಯಾಕಿಂಗ್ ಮಾಡುತ್ತಿಲ್ಲ. ಜನರನ್ನು ವಂಚನೆ ಮಾಡಲು ಕೇಂದ್ರ ಸಚಿವಾಲಯದ ಹೆಸರನ್ನು ಬಳಕೆ ಮಾಡಲಾಗುತ್ತಿದೆ.