ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಡೌನ್ಲೋಡ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಸೂರತ್ ನಗರದ ಕೋಸದ್ ಮತ್ತು ವಡೋದ್ ಪ್ರದೇಶಗಳಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇದೇ ವೇಳೆ ಪೊಲೀಸರು 65 ಕ್ಲಿಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಬಿತ್ತರಿಸುತ್ತಿದ್ದರು ಎಂಬ ಪಕ್ಕಾ ಮಾಹಿತಿ ಪಡೆದ ಪೊಲೀಸರು ಅಂಗಡಿಗಳ ಮೇಲೆ ರೇಡ್ ಮಾಡಿದ್ದಾರೆ.
ಭಾರತದಲ್ಲಿ ನೀಲಿ ಚಿತ್ರಗಳ ಮಾರಾಟ, ಪ್ರಕಟಣೆ ಹಾಗೂ ಉತ್ಪಾದನೆ ಅಪರಾಧವಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292, 293 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2000ದ ಸೆಕ್ಷನ್ 67ಬಿ ಅಡಿ ಕಟ್ಟುನಿಟ್ಟಿನ ನಿಷೇಧ ವಿಧಿಸಲಾಗಿದೆ. ಆದರೆ ಮಕ್ಕಳು ಭಾಗಿಯಾಗಿರದ ಹಾಗೂ ಅತ್ಯಾಚಾರವಲ್ಲದ ನೀಲಿ ಚಿತ್ರಗಳನ್ನು ಖಾಸಗಿಯಾಗಿ ವೀಕ್ಷಣೆ ಮಾಡುವುದಕ್ಕೆ ಅಡಚಣೆ ಇಲ್ಲ.
ಉತ್ತರಾಖಂಡ ಹೈಕೋರ್ಟ್ ಆದೇಶಾನುಸಾರ ನೀಲಿ ಚಿತ್ರಗಳನ್ನು ಬಿತ್ತರಿಸುವ 827 ಜಾಲತಾಣಗಳನ್ನು ನಿಷೇಧಿಸುವಂತೆ 2018ರಲ್ಲಿ ಭಾರತ ಸರ್ಕಾರ ಅಂತರ್ಜಾಲ ಸೇವಾದಾರರಿಗೆ ಆದೇಶಿಸಿತ್ತು.
ಅಂತರ್ಜಾಲದಲ್ಲಿ ನೀಲಿ ಚಿತ್ರದ ವಿಡಿಯೋ ವೀಕ್ಷಿಸಿದ್ಧ ಶಾಲೆಯೊಂದರ ನಾಲ್ಕು ಹುಡುಗರು ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಬೆನ್ನಿಗೇ ಉತ್ತಾರಖಂಡ ಹೈಕೋರ್ಟ್ ಈ ತೀರ್ಪು ನೀಡಿತ್ತು.