ಬೆಳಗಾವಿ: ಮೂರು ದಿನಗಳ ಹಿಂದೆ ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಮಾರ್ಕಾಂಡೇಯ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ರೈತ ಇದೀಗ ಶವವಾಗಿ ಪತ್ತೆಯಾಗಿದ್ದು, ಬೆಳಗಾವಿ ಜಿಲ್ಲೆಯ ದರ್ಗಾ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಸಿದ್ರಾಯ ಸುತಗಟ್ಟಿ ಎಂಬ ರೈತ ಹೊಲಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ ಕೈಕಾಲು ತೊಳೆಯಲೆಂದು ಮಾರ್ಕಾಂಡೇಯ ನದಿಗೆ ಕಾಕತಿ ಬಳಿ ನಿರ್ಮಿಸಿರುವ ಸೇತುವೆ ಬಳಿ ನೀರಿಗೆ ಇಳಿದಿದ್ದ. ಈ ವೇಳೆ ನದಿ ನೀರಿನ ರಭಸಕ್ಕೆ ರೈತ ಕೊಚ್ಚಿ ಹೋಗಿದ್ದ. ಎನ್ ಡಿ ಆರ್ ಎಫ್ ಹಾಗೂ ಸ್ಥಳೀಯರಿಂದ ರೈತನಿಗಾಗಿ ನದಿಯಲ್ಲಿ ಶೋಧ ನಡೆಸಲಾಗಿತ್ತು. ಆದರೆ ಈವರೆಗೂ ಸುಳಿವಿರಲಿಲ್ಲ.
ಇದೀಗ ರೈತನ ಶವ ಕಾಕತಿ ಬಳಿಯಿರುವ ಮತ್ತೊಂದು ಸೇತುವೆ ಬಳಿ ಪತ್ತೆಯಾಗಿದೆ. ಕಾಕತಿ ಸೇತುವೆಯಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ದರ್ಗಾ ಸೇತುವೆ ಬಳಿ ಸಿದ್ರಾಯ ಶವ ಪತ್ತೆಯಾಗಿದ್ದು, ಶವವನ್ನು ಹೊರತೆಗೆಯಲಾಗಿದೆ.