ಬೆಂಗಳೂರು : ಎಫ್ ಐ ಆರ್ ದಾಖಲಿಸಿಕೊಳ್ಳದೆ ಯುವಕನೊಬ್ಬನನ್ನು ಠಾಣೆಗೆ ಕರೆತಂದು ಥಳಿಸಿದ್ದಲ್ಲದೆ, ನೀರು ಕೇಳಿದರೆ ಮೂತ್ರ ಕುಡಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಒಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ.
ಅಕ್ಕಪಕ್ಕದ ಮನೆಯವರೊಂದಿಗೆ ಜಗಳವಾಡಿದ್ದಾನೆ ಎಂಬ ಕಾರಣಕ್ಕೆ ನಗರದ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ತೌಸಿಫ್ ಎಂಬ ವ್ಯಕ್ತಿಯನ್ನು ಠಾಣೆಗೆ ಕರೆತಂದು ಥಳಿಸಿದ್ದಲ್ಲದೆ, ಮೂತ್ರ ಕುಡಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ, ಬಿಡುಗಡೆಗೆ ಹಣ ಕೇಳಿದ್ದರು ಎಂದು ತೌಸಿಫ್ ತಂದೆ ಆರೋಪಿಸಿದ್ದರು.
ಘೋರ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್: CDS ಬಿಪಿನ್ ರಾವತ್, ಪತ್ನಿ ಮತ್ತು 11 ಮಂದಿ ಸಾವು
ಈ ಆರೋಪದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬ್ಯಾಟರಾಯನಪುರದ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಕೂಡ ಸೃಷ್ಟಿಯಾಗಿತ್ತು.
ಹೀಗಾಗಿ ಇಲಾಖಾ ಮಟ್ಟದಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ವಿರುದ್ಧ ತನಿಖೆಗೆ ಆದೇಶ ನೀಡಲಾಗಿತ್ತು. ವಿಚಾರಣೆಯ ನಂತರ ಪೊಲೀಸ್ ಸಬ್ ಇನ್ಸಪೆಕ್ಟರ್ ಹರೀಶ್ ಕೆ.ಎನ್. ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪ ಹಾಗೂ ದೂರು ದಾಖಲಿಸಿಕೊಳ್ಳದ ಆರೋಪ ಸಸ್ಪೆಂಡ್ ಆದ ಹರೀಶ್ ಅವರ ಮೇಲಿದೆ.