ನಿತ್ಯ ಮುಂಜಾನೆ ಸ್ನಾನ ಮಾಡಿ ಫ್ರೆಶ್ ಆಗೋದು ಬಹುತೇಕ ಎಲ್ಲರ ಅಭ್ಯಾಸ. ಇದು ಒಂದು ದಿನ ತಪ್ಪಿದರೂ ಸಹ ಮನಸ್ಸಿಗೆ ಏನೋ ಒಂದು ರೀತಿಯ ಕಿರಿಕಿರಿ ಅನುಭವವಾಗುತ್ತದೆ. ಆದರೆ ಸ್ನಾನ ಮಾಡದೆಯೂ ಕೆಲವರು ಇರುತ್ತಾರೆ. ಇದರ ಮಧ್ಯೆ ಈ ಯುವತಿಯದು ಡಿಫರೆಂಟ್ ಕಥೆ.
ಅಮೆರಿಕಾದ 23 ವರ್ಷದ ಯುವತಿ ಅಡಾನ್ ಜೇನ್ ಹತ್ತು ದಿನಕೊಮ್ಮೆ ಸ್ನಾನ ಮಾಡುತ್ತಾಳಂತೆ. ಇದರಿಂದ ಪರಿಸರಕ್ಕೂ ಒಳ್ಳೆಯದು ಎಂಬುದು ಆಕೆಯ ಅಭಿಪ್ರಾಯ. ಜೊತೆಗೆ ಇದರಿಂದ ನೀರು ಸಹ ಉಳಿತಾಯವಾಗುತ್ತದೆ ಎಂದು ಹೇಳುತ್ತಾಳೆ ಈಕೆ.
ಹತ್ತು ದಿನಕೊಮ್ಮೆ ಸ್ನಾನ ಮಾಡಿದರೂ ಸಹ ನಾನು ಫ್ರೆಶ್ ಆಗಿಯೇ ಇರುತ್ತೇನೆ ಎಂದು ಹೇಳುವ ಆಕೆ, ಇದರಿಂದ ಕೂದಲು ಉರುಟು ಉರುಟಾಗುತ್ತದೆ ಹೊರತು ಬೇರೆ ಯಾವುದೇ ಸಮಸ್ಯೆ ನನಗೆ ಆಗಿಲ್ಲ ಎಂದು ಹೇಳಿದ್ದಾಳೆ.
ಪ್ರತಿನಿತ್ಯ ಸ್ನಾನ ಮಾಡಿದಾಗ ಕೂದಲು ಸ್ಮೂತ್ ಆಗಿರುತ್ತದೆ. ಅದು ಬಿಟ್ಟರೆ 10 ದಿನಕ್ಕೆ ಒಮ್ಮೆ ನಾನು ಸ್ನಾನ ಮಾಡುವುದು ಬೇರೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಆಕೆಯ ಅಂಬೋಣ. ಜೊತೆಗೆ ಎಲ್ಲರೂ ಇದನ್ನು ಪಾಲಿಸುವ ಮೂಲಕ ನೀರನ್ನು ಉಳಿಸಬೇಕಿದೆ ಎಂಬ ಸಲಹೆಯನ್ನೂ ನೀಡಿದ್ದಾಳೆ.
ಇದಕ್ಕಾಗಿ ಟಿಕ್ ಟಾಕ್ ನಲ್ಲಿ ವಿಡಿಯೋಗಳನ್ನು ಸಹ ಹರಿಬಿಟ್ಟಿದ್ದು, ಜನ ಇವುಗಳನ್ನು ಮುಗಿಬಿದ್ದು ನೋಡಿದ್ದಾರೆ. ಇವಳ ಈ ಸ್ನಾನದ ಕಥೆಗೆ ಪರ – ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.