
ನೀರುನಾಯಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಟ್ರಾಫಿಕ್ ಪೊಲೀಸ್ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಸುಂದರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಒಂದು ನಿಮಿಷದ ವಿಡಿಯೋದಲ್ಲಿ, 16 ನೀರುನಾಯಿಗಳ ಗುಂಪು ರಸ್ತೆ ದಾಟುತ್ತಿರುವುದನ್ನು ತೋರಿಸಿದೆ.
ದೃಶ್ಯವನ್ನು ಡಬಲ್ ಡೆಕ್ಕರ್ ಬಸ್‌ನಲ್ಲಿ ಪ್ರಯಾಣಿಕರು ಚಿತ್ರೀಕರಿಸಿದ್ದಾರೆ ಎಂದು ತೋರುತ್ತದೆ. ಅದರಲ್ಲಿ ನೀರುನಾಯಿಗಳು ರಸ್ತೆ ದಾಟಲು ಕಾಯುತ್ತಿರುವುದನ್ನು ಕಾಣಬಹುದು. ನೀರುನಾಯಿಗಳನ್ನು ನೋಡಿದ ಇಸ್ತಾನಾ ಪೊಲೀಸ್ ಗಾರ್ಡ್‌ಗಳು ಸಸ್ತನಿಗಳಿಗೆ ರಸ್ತೆ ದಾಟಲು ಅನುವು ಮಾಡಿಕೊಡಲು ಟ್ರಾಫಿಕ್ ಸಿಗ್ನಲ್ ಲೈಟ್ ಅನ್ನು ಕೆಂಪು ಬಣ್ಣಕ್ಕೆ ತಿರುಗಿಸಿದ್ದಾರೆ.
ಯಾವುದೇ ವಾಹನಗಳು ರಸ್ತೆಯಲ್ಲಿ ಹೋಗುತ್ತಿಲ್ಲವಾದುದರಿಂದ ನೀರು ನಾಯಿಗಳು ಒಂದೊಂದಾಗಿ ಓಡುತ್ತಾ ರಸ್ತೆ ದಾಟಿವೆ. ಕೆಲವು ನೀರುನಾಯಿಗಳು ಹಿಂದೆ ಸರಿಯುತ್ತಿದ್ದರಿಂದ ಟ್ರಾಫಿಕ್ ಅನ್ನು ಹಿಡಿದಿಡಲು ಪೊಲೀಸ್ ರಸ್ತೆಯ ಮಧ್ಯದಲ್ಲಿ ನಿಂತು ಯಾವುದೇ ವಾಹನಗಳು ಬರದಂತೆ ತಡೆದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಟ್ರಾಫಿಕ್ ಪೊಲೀಸರ ಕಾಳಜಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.