ಚುನಾಯಿತ ಪ್ರತಿನಿಧಿಗಳಾದ ಶಾಸಕರು ತಮ್ಮ ಕ್ಷೇತ್ರದ ಕೆಲಸ ಕಾರ್ಯಗಳನ್ನು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಮಾಡಿಸುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಸ್ವತಃ ಶಾಸಕರು ಮಾಡಿರುವ ಕಾರ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೌದು, ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ನೀರಿನ ಹರಿವು ನಿಲ್ಲಿಸುವ ಸಲುವಾಗಿ ಕೆಲಸ ನಡೆಯುತ್ತಿದ್ದ ವೇಳೆ ಸ್ವತಃ 75 ಕೆ.ಜಿ. ತೂಕದ ಮರಳಿನ ಚೀಲವನ್ನು ಹೆಗಲ ಮೇಲೆ ಹೊತ್ತು ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಇಂತಹದೊಂದು ಘಟನೆ ಗುರುವಾರದಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಸೂಗೂರು ಬಳಿ ಎಲ್‌ಎಲ್‌ಸಿ ವಿತರಣೆ ಕಾಲುವೆಯಲ್ಲಿ ಹರಿಯುವ ನೀರನ್ನು ನಿಲ್ಲಿಸುವ ಮೂಲಕ ಮೇಲ್ಭಾಗದ ರೈತರ ಬೆಳೆ ರಕ್ಷಿಸುವ ಕಾರ್ಯ ನಡೆದಿದ್ದು, ಈ ವೇಳೆ ಶಾಸಕರು, ಅಧಿಕಾರಿಗಳು ಮತ್ತು ರೈತರ ಜೊತೆ ಚರ್ಚೆ ನಡೆಸಿದ್ದಲ್ಲದೆ ಹರಿವು ನಿಲ್ಲಿಸುವ ಕಾರ್ಯದಲ್ಲಿ ಸ್ವತಃ ಕೈಜೋಡಿಸಿದ್ದಾರೆ.