ಎಷ್ಟೇ ಮುನ್ನೆಚ್ಚರಿಕೆ ಕೈಗೊಂಡರೂ ಸಂಭವಿಸಲಿರೋ ಅಪಘಾತ, ಅವಘಡಗಳನ್ನ ತಪ್ಪಿಸೋಕೆ ಸಾಧ್ಯವೇ ಇಲ್ಲ. ಇನ್ನೂ ಕೆಲ ಸಂದರ್ಭದಲ್ಲಿ ನಡೆದಿರೋ ಘಟನೆ ನೋಡ್ತಿದ್ರೆ ಇದ್ಹೇಗೆ ಸಾಧ್ಯವಾಯ್ತು ಅಂತಾನೂ ಅನ್ಸುತ್ತೆ. ಅಂತಹದ್ದೇ ಒಂದು ವಿಚಿತ್ರ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ.
ಒಂದೇ ಒಂದು ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಾಕಿಕೊಂಡರೆ, ಆಗೋ ಕಿರಿಕಿರಿ ಅಷ್ಟಿಷ್ಟಲ್ಲ. ಆದರೆ ಇಲ್ಲಿ ನೋಡಿ ಮೀನಿನ ಮುಳ್ಳಲ್ಲ….. ಒಂದು ಜೀವಂತ ಮೀನೇ ಮೀನುಗಾರನ ಗಂಟಲಲ್ಲಿ ಸಿಕ್ಕಾಕಿಕೊಂಡಿತ್ತು.
ಆತ ಓರ್ವ ಮೀನುಗಾರ, ಎಂದಿನಂತೆ ಮೀನು ಹಿಡಿಯಲು ಹೋಗಿದ್ದಾನೆ. ಗಾಳ ಹಾಕಿ ಮೀನು ಸಿಕ್ಕಾಕಿಕೊಳ್ಳಲಿ ಅಂತ ಕಾಯ್ತಿದ್ಧಾನೆ. ಆಗಲೇ ಮೀನೊಂದು ತಕ್ಷಣವೇ ನೀರಿನಿಂದ ಹೊರಗೆ ಹಾರಿದೆ. ಹಾಗೆ ಹಾರಿದ ಮೀನು ಮೀನುಗಾರನ ಬಾಯೊಳಗೆ ಹೋಗಿ ಗಂಟಲಲ್ಲಿ ಸಿಕ್ಕಾಕಿಕೊಂಡಿದೆ. ನಡೆದ ಆಕಸ್ಮಿಕ ಘಟನೆಯಿಂದಾಗಿ ಅಲ್ಲಿದ್ದವರೆಲ್ಲ ಶಾಕ್ ನಲ್ಲಿದ್ದರು. ಮೀನು ಗಂಟಲಲ್ಲಿ ಸಿಕ್ಕಾಕಿಕೊಂಡ ಪರಿಣಾಮ ವ್ಯಕ್ತಿಯ ಉಸಿರಾಟಕ್ಕೆ ತೊಂದರೆಯಾಗಿದೆ. ಆ ತಕ್ಷಣವೇ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲಾಗಿದೆ.
ವೈದ್ಯರು ರೋಗಿ ಪರಿಸ್ಥಿತಿ ನೋಡಿ ದಂಗಾಗಿದ್ದರು. ಕೊನೆಗೆ ಶಸ್ತ್ರಚಿಕಿತ್ಸೆ ಮಾಡಿ ಗಂಟಲಲ್ಲಿ ಸಿಕ್ಕಾಕಿಕೊಂಡಿರೋ ಮೀನನ್ನ ಹೊರಗೆ ತೆಗೆದಿದ್ದಾರೆ. ವೈದ್ಯರೂ ಕೂಡಾ ಮೀನನ್ನ ಹೊರಗೆ ತೆಗೆಯಲು ಹರಸಾಹಸ ಮಾಡಿದ್ದಾರೆ. ಒಂದು ಚೂರು ಎಡವಟ್ಟಾಗಿದ್ರೂ ರೋಗಿಯ ಜೀವಕ್ಕೇನೆ ಅಪಾಯ ಆಗುವ ಸಾಧ್ಯತೆ ಇತ್ತು.
ಆದರೆ ವೈದ್ಯರು ಯಾವುದೇ ರೀತಿಯ ಸಮಸ್ಯೆ ಆಗದಂತೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಗಂಟಲಲ್ಲಿ ಸಿಕ್ಕಾಕಿಕೊಂಡಿರೋ ಮೀನನ್ನ ಹೊರಗೆ ತೆಗೆದಿದ್ದಾರೆ. ಈಗ ರೋಗಿ ಸೇಫ್ ಆಗಿದ್ದಾನೆ.