![](https://kannadadunia.com/wp-content/uploads/2021/12/2588f0ce-0c01-42ef-a039-3075b53bb582.jpg)
ದಕ್ಷಿಣದ ಸುಂದರಿ ಸಾಯಿ ಪಲ್ಲವಿ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳಲ್ಲಿ ಪೂಲ್‌ಸೈಡ್‌ನಲ್ಲಿ ಮೋಜಿನ ಸಮಯವನ್ನು ಕಳೆಯುತ್ತಿದ್ದಾರೆ. ಈ ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ನಟಿ, “ಒಳಗಿನ ಮಗುವಿನೊಂದಿಗೆ ಸಂಪರ್ಕದಲ್ಲಿರುವಂತೆ ಭಾಸವಾಗುತ್ತಿದೆ(in touch with inner child)” ಎಂದು ಶೀರ್ಷಿಕೆ ನೀಡಿದ್ದಾರೆ.
ಪೂಲ್‌ಸೈಡ್‌ನಲ್ಲಿ ಸಮಯ ಕಳೆಯುತ್ತಿರುವಾಗ, ನಟಿ ಕ್ಯಾಶುಯಲ್ ಮತ್ತು ಆರಾಮದಾಯಕವಾದ ಸಲ್ವಾರ್ ಸೂಟ್‌ನಲ್ಲಿ ಕೆಲವು ಸುಂದರವಾದ ಹೂವುಗಳೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ಸಹಜ ಸುಂದರಿ ಸಾಯಿ ಪಲ್ಲವಿಯ ಎಂದಿನ ಮೇಕಪ್ ರಹಿತ ಲುಕ್ ಆಕೆ ಅಭಿಮಾನಿಗಳನ್ನ ಮಂತ್ರ ಮುಗ್ಧರಾಗಿಸಿದೆ. ಸಾಯಿ ಪಲ್ಲವಿ, ಇತ್ತೀಚೆಗೆ ಕೆಂಪು ಸೀರೆಯಿಂದ ಹಿಡಿದು ಬಿಳಿ ಮತ್ತು ನೀಲಿ ಕುರ್ತಾದವರೆಗೆ ವಿಭಿನ್ನ ಉಡುಪುಗಳನ್ನು ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲಾ ಚಿತ್ರಗಳಲ್ಲಿ ಸಾಮಾನ್ಯವಾದ ಒಂದು ವಿಷಯವೆಂದರೆ ನಕ್ಷತ್ರದಂತ ನಗು, ಮಗುವಿನಂತಹ ಮುಗ್ಧತೆ ಮತ್ತು ಆಕೆಯ ಸಹಜ ಸೌಂದರ್ಯ.
BIG NEWS: ಬಾಸಿಸಮ್ ಬಿಡಿ, ವಿವೇಚನೆಯಿಂದ ಕೆಲಸ ಮಾಡಿ; ಡಿಸಿಗಳಿಗೆ ಸಿಎಂ ಬೊಮ್ಮಾಯಿ ಖಡಕ್ ವಾರ್ನಿಂಗ್
ನಟಿ ಸಾಯಿ ಪಲ್ಲವಿ ಇತ್ತೀಚೆಗೆ ರಾಹುಲ್ ಸಂಕೃತ್ಯನ್ ಅವರ ರೋಮ್ಯಾಂಟಿಕ್ ಥ್ರಿಲ್ಲರ್ ಶ್ಯಾಮ್ ಸಿಂಘ ರಾಯ್ ನಲ್ಲಿ ನಾನಿ ಜೊತೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರವು 24 ಡಿಸೆಂಬರ್ 2021 ರಂದು ಬಿಡುಗಡೆಯಾಗಿ, ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದೆ. ಶ್ಯಾಮ್ ಸಿಂಘ ರಾಯ್ ನಂತರ, ಸಾಯಿ ಪಲ್ಲವಿ ವೇಣು ಉಡುಗುಲ ಅವರ ವಿರಾಟ ಪರ್ವಂನ ಭಾಗವಾಗಲು ಸಿದ್ಧರಾಗಿದ್ದಾರೆ. ರಾಣಾ ದಗ್ಗುಬಾಟಿ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸುರೇಶ್ ಬಾಬು ಮತ್ತು ಸುಧಾಕರ್ ಚೆರುಕುರಿ ನಿರ್ಮಾಪಕರಾಗಿದ್ದಾರೆ. ಇನ್ನುಳಿದಂತೆ ಪ್ರಿಯಾಮಣಿ, ನಂದಿತಾ ದಾಸ್, ನವೀನ್ ಚಂದ್ರ, ಜರೀನಾ ವಹಾಬ್, ಈಶ್ವರಿ ರಾವ್ ಮತ್ತು ಸಾಯಿ ಚಂದ್ ಸೇರಿದಂತೆ ಇತರ ತಾರೆಯರು ಸಹ ಈ ಚಿತ್ರದ ಭಾಗವಾಗಿದ್ದಾರೆ.