
ಕ್ಯಾಲಿಫೋರ್ನಿಯಾದಲ್ಲಿ ಜನಸಂಚಾರ ಎಂದಿನಂತೆ ಇರಬೇಕಿದ್ರೆ, ಕಡಲ ಸಿಂಹವೊಂದು ಆಚಾನಕ್ ಆಗಿ ಭೇಟಿ ಕೊಟ್ಟಿದೆ. ಕಡಲ ಸಿಂಹವನ್ನು ನೋಡಿದ ತಕ್ಷಣ ಅಲ್ಲಿದ್ದ ಜನರು ಅದು ಹೆದ್ದಾರಿ ದಾಟಲು ಸಹಾಯ ಮಾಡಿದ್ದಾರೆ.
ಸ್ಯಾನ್ ಡಿಯಾಗೋ ಡೌನ್‌ಟೌನ್‌ನ ಮಾರ್ಗದಲ್ಲಿ ವಾಹನ ಚಾಲಕರು ಈ ಜೀವಿಯನ್ನು ಗುರುತಿಸಿದ್ದು, ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಇದರಿಂದಾಗಿ ಹಲವಾರು ನಿಮಿಷಗಳ ಕಾಲ ಸಂಚಾರ ಸ್ಥಗಿತಗೊಂಡಿತು.
ವಿಷಯ ತಿಳಿದ ಕೂಡಲೇ ಸೀವರ್ಲ್ಡ್ ಸ್ಯಾನ್ ಡಿಯಾಗೋ ಪಾರುಗಾಣಿಕಾ ತಂಡ ಸ್ಥಳಕ್ಕಾಗಮಿಸಿದೆ. ಕಡಲ ಸಿಂಹ ಬೇರೆಡೆ ಚಲಿಸದಂತೆ ತಡೆಯಲು ಬಲೆ ಬೀಸಿದೆ. ಜೀವಿಯ ರಕ್ಷಣೆಯ ನಂತರ, ಅದರ ಆರೋಗ್ಯ ತಪಾಸಣೆ ಮತ್ತು ಪುನರ್ವಸತಿಗಾಗಿ ಸೀವರ್ಲ್ಡ್ ಸ್ಯಾನ್ ಡಿಯಾಗೋ ಪಾರುಗಾಣಿಕಾ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಆದರೆ, ಹೆದ್ದಾರಿಗೆ ಕಡಲ ಸಿಂಹ ಹೇಗೆ ಬಂದಿತು ಅನ್ನೋದು ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಇನ್ನೂ ಕೂಡ ಸ್ಪಷ್ಟ ಮಾಹಿತಿ ದೊರೆತಿಲ್ಲ.