ಪ್ರತಿಯೊಬ್ಬರು ಮನೆಯ ಎದುರುಗಡೆ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡುತ್ತಾರೆ. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಇದೆ. ಹಾಗೇ ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಈ ಕೆಲಸ ಮಾಡಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ.
ತುಳಸಿ ಗಿಡ ಲಕ್ಷ್ಮೀ ವಾಸ ಸ್ಥಳವಾಗಿರುವುದರಿಂದ ಅದನ್ನು ನೆಟ್ಟು ಎಲ್ಲರೂ ಭಕ್ತಿಯಿಂದ ಪ್ರತಿದಿನ ಪೂಜೆ ಮಾಡುತ್ತಾರೆ. ಇದರಿಂದ ತುಳಸಿ ಮಾತೆಯ ಅನುಗ್ರಹ ನಿಮ್ಮ ಮನೆಗೆ ಸಂಪೂರ್ಣವಾಗಿ ದೊರೆಯುತ್ತದೆ. ಇದರಿಂದ ಮನೆಗೆ ಯಾವುದೇ ಮಾಟಮಂತ್ರ, ದುಷ್ಟ ಶಕ್ತಿ ಪ್ರವೇಶ ಆಗುವುದಿಲ್ಲ. ಬದಲಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ಹಾಗೇ ತುಳಸಿ ಪೂಜೆ ಮಾಡುವ ಮೊದಲು ತುಳಸಿ ಗಿಡಕ್ಕೆ ನೀರನ್ನು ಹಾಕುತ್ತಾರೆ. ಆ ವೇಳೆ ತುಂಬಿದ ಬಿಂದಿಗೆಯಲ್ಲಿ ನೀರನ್ನು ಹಾಕಬೇಕು. ಯಾವುದೇ ಕಾರಣಕ್ಕೂ ಅರ್ಧ ಬಿಂದಿಗೆ ನೀರನ್ನು ಹಾಕಬಾರದು. ಹಾಗೇ ತುಳಸಿ ಗಿಡಕ್ಕೆ ಬಳಸುವ ನೀರಿಗೆ 3 ಚಿಟಿಕೆ ಅರಶಿನವನ್ನು ಬೆರೆಸಿದರೆ ಅದು ಶುದ್ಧವಾಗುತ್ತದೆ. ಈ ನೀರನ್ನು ತುಳಸಿಗೆ ಹಾಕಿದರೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ.