ವರ್ತಮಾನದಲ್ಲಿದ್ದು, ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಮುಂದೆ ಭವಿಷ್ಯದಲ್ಲಿ ಏನಾಗುತ್ತೆ? ಆರ್ಥಿಕ ಸ್ಥಿತಿ ಹೇಗಿರುತ್ತೆ? ಆರೋಗ್ಯ ಹೇಗಿರುತ್ತೆ ಎಂಬುದನ್ನು ತಿಳಿದುಕೊಳ್ಳಲು ಜನರು ಜ್ಯೋತಿಷ್ಯದ ಮೊರೆ ಹೋಗ್ತಾರೆ. ನಮ್ಮ ದೇಹದಲ್ಲಾಗುವ ತುರಿಕೆ ಕೂಡ ನಮ್ಮ ಭವಿಷ್ಯವನ್ನು ಹೇಳುತ್ತೆ ಅನ್ನೋದು ನಿಮಗೆ ಗೊತ್ತಾ?
ತುರಿಗೆ ನಮ್ಮ ದೇಹದಲ್ಲಾಗುವ ಸಾಮಾನ್ಯ ಪ್ರಕ್ರಿಯೆ. ಯಾವಾಗ ಯಾವ ಅಂಗದಲ್ಲಿ ಬೇಕಾದ್ರೂ ತುರಿಕೆ ಕಾಣಿಸಿಕೊಳ್ಳಬಹುದು. ನಮ್ಮ ಚರ್ಮಕ್ಕೆ ಸೋಂಕು ತಗುಲಿದಾಗ ತುರಿಕೆಯಾಗುತ್ತೆ ಅಂತಾ ವೈದ್ಯಕೀಯ ಲೋಕ ಹೇಳುತ್ತೆ. ಆದ್ರೆ ತುರಿಕೆ ಭವಿಷ್ಯವನ್ನು ಹೇಳುತ್ತೆ ಎಂಬ ನಂಬಿಕೆ ನಮ್ಮಲ್ಲಿದೆ.
ಬಲ ಅಂಗೈ ತುರಿಕೆ ಸದ್ಯದಲ್ಲಿಯೇ ಆರ್ಥಿಕ ವೃದ್ಧಿಯಾಗಲಿದೆ ಎನ್ನುವ ಮುನ್ಸೂಚನೆ ನೀಡಲಿದೆ.
ಬೆನ್ನಿನ ತುರಿಕೆ ನೋವು ಹಾಗೂ ಕಷ್ಟದ ಸಂಕೇತವಾಗಿದೆ.
ಎಡಗೈ ತುರಿಸಿದ್ರೆ ಹಣ ವ್ಯಯವಾಗುತ್ತದೆ ಎಂದರ್ಥ.
ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕಣ್ಣು ತುರಿಸಿದಂತೆ ಕಂಡು ಬಂದ್ರೆ ಲಾಟರಿ ಹೊಡೆಯಲಿದೆ ಎನ್ನುವುದರ ಮುನ್ಸೂಚನೆ.
ಎದೆಯ ಭಾಗದಲ್ಲಿ ತುರಿಕೆಯಾದಂತೆ ಕನಸು ಕಂಡ್ರೆ ಧನ-ದಾನ್ಯ, ವೈಭವ ಪ್ರಾಪ್ತಿಯಾಗಲಿದೆ.
ತುಟಿ ತುರಿಸಿದ್ರೆ ನಿಮ್ಮಿಷ್ಟದ ಊಟ ತಿನ್ನುವ ಅವಕಾಶ ಸಿಗಲಿದೆ.
ಅಂಗಾಲಿನಲ್ಲಿ ತುರಿಕೆ ಕಂಡು ಬಂದ್ರೆ ಪ್ರವಾಸದ ಯೋಗವಿದೆ ಎಂದರ್ಥ.